`ರಾಮಸಾಂಗತ್ಯ’ ಕೃತಿಯು ಇಂದಿರಾಜಾನಕಿ ಎಸ್ ಶರ್ಮ ಅವರ ಸಾಂಗತ್ಯ ಲಯದ ರಾಮಾಯಣದ ಒಂದು ಕಥೆಯಾಗಿದೆ. ಕೃತಿ ಕುರಿತು ಅಜಕ್ಕಳ ಗಿರೀಶ ಭಟ್ ಅವರು ಹೀಗೆ ಹೇಳಿದ್ದಾರೆ; ಇಂದಿರಾಜಾನಕಿಯವರು ತಮ್ಮ ವಿಚಾರಗಳನ್ನಾಗಲೀ ಆಧುನಿಕ ಸಿದ್ಧಾಂತಗಳನ್ನಾಗಲೀ ತಮ್ಮ ರಾಮಾಯಣದ ಮೇಲೆ ಹೇರಲು ಹೋಗಿಲ್ಲ. ವಾಲ್ಮೀಕಿಗೆ ನಿಷ್ಠವಾಗಿಯೇ ಬಾಲಕಾಂಡದಿಂದ ತೊಡಗಿ ಯುದ್ಧಕಾಂಡದವರೆಗೆ ಅವರ ಕಾವ್ಯ ಸಾಗುತ್ತದೆ. ರಾಮಾಯಣ, ಮಹಾಭಾರತಗಳಂತಹ ಪುರಾಣಕಥೆಗಳನ್ನು ಹೊಸದಾಗಿ ನಿರೂಪಿಸುವವರು ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಇದ್ದುದನ್ನೇ ಹೇಳಲು ಆಗುವುದಿಲ್ಲ. ಹಾಗೆಂದು, ವಾಲ್ಮೀಕಿ, ವ್ಯಾಸರ ಆಶಯಕ್ಕೆ ಅಥವಾ ದರ್ಶನಕ್ಕೆ ವಿರುದ್ಧವಾದ ಹೊಸತನ್ನೂ ಹೇಳಲೂ ಆಗದು. ಹಾಗಿರುವಾಗ ಮಧ್ಯದ ಸರಿಯಾದ ದಾರಿಯೆಂದರೆ ವಾಲ್ಮೀಕಿ, ವ್ಯಾಸ ದರ್ಶನಗಳಿಗೆ ವಿರೋಧವಾಗದಂತೆ ಹೊಸ ರೀತಿಯಲ್ಲಿ ಹಳೆಯ ಕಥೆಯನ್ನು ಹೇಳುವುದು. ಇದಕ್ಕೆ ಕವಿಯ ದಾರ್ಶನಿಕ ಒಳನೋಟ, ಉಪಮೆ-ರೂಪಕಗಳನ್ನು ಸೃಷ್ಟಿಸುವ ಪ್ರತಿಭೆ ಇವೆಲ್ಲ ಅನುಕೂಲಕರವಾಗಿ ಒದಗಿ ಬರುತ್ತವೆ. ಹಿಂದೆಯೇ ಹೇಳಿದಂತೆ ಕುವೆಂಪು ಅವರ ‘ಶ್ರೀ ರಾಮಾಯಣದರ್ಶನಂ’ ಈ ದೃಷ್ಟಿಯಲ್ಲಿ ಬಹಳ ಯಶಸ್ವಿಯಾದ ಮಹಾಕೃತಿಯಾಗಿದೆ.
©2024 Book Brahma Private Limited.