ಪೂರ್ವರಂಗ-ಕವಿ ಮಧುರಚೆನ್ನ ಅವರು ಹೇಳುವಂತೆ ಈ ಕೃತಿಯು ಒಂದು ಅಧ್ಯಾತ್ಮಿಕ ಕಥೆ. ಒಂದರ್ಥದಲ್ಲಿ ಕವಿಯ ಸಾಧನೆಯ ಆತ್ಮಕಥೆಯೂ ಆಗಿದೆ. ಕೃತಿಯಲ್ಲಿ ಎರಡು ಭಾಗಗಳಲ್ಲಿ ವಿಚಾರಗಳನ್ನು ಮಂಡಿಸಲಾಗಿದೆ. ಒಂದು ವೈಷಮ್ಯ ಖಂಡ, ಮತ್ತೊಂದು ಸಮನ್ವಯ ಖಂಡ. ವೈಷಮ್ಯ ಖಂಡದಲ್ಲಿ ರಾಜಸಬುದ್ಧಿಗೆ ತಕ್ಕಂತೆ ವಿಚಾರಗಳು ವಿಷಮವಾಗಿವೆ. ಆ ಕಾಲಕ್ಕೆ ಈ ವಿಚಾರಗಳು ಹೇಗೆ ವ್ಯಕ್ತವಾದವೋ ಅದೇ ರೀತಿಯಲ್ಲಿ ವ್ಯಕ್ತ ಮಾಡಲಾಗಿದೆ. ಸಮನ್ಮಯ ಖಂಡದಲ್ಲಿ, ಈ ವಿಷಮ ವಿಚಾರಗಳ ಸಮನ್ವಯವಿಲ್ಲ. ಆದರೆ, ಮನದ ವೈಷಮ್ಯವು ಶಾಂತಿಯ ಸಮತೆಯಲ್ಲಿ ಹೇಗೆ ಬಾಯಿಗೂಡಿತು ಎಂಬುದನ್ನು ಹೇಳಲಾಗಿದೆ.
ಸಂಶಯವನ್ನೂ,, ವೈಷಮ್ಯವನ್ನೂ, ಅತೃಪ್ತಿಯನ್ನು ಹೇಗೆ ಉಂಟು ಮಾಡುತ್ತವೆ ಎಂಬ ಬಗ್ಗೆ ವಾಸ್ತವದ ದರ್ಶನವು ವೈಷಮ್ಯ ಖಂಡದಲ್ಲಿದ್ದರೆ , ಸಾತ್ವಿಕ ಜೀವನ ದರ್ಶನವು ಸಮನ್ವಯ ಖಂಡದಲ್ಲಿದೆ.
ವೈಷಮ್ಯ ಖಂಡದಲ್ಲಿ ಗುರುಪೂಜೆ, ಮೂರ್ತಿಪೂಜೆ, ವೈರಭಕ್ತಿಯ ಶೀಘ್ರ ಫಲ, ಘೋರ ಸಾಹಸ, ಕಲ್ಪನಾತೀತ, ಸತ್ಸಂಗ ಹಾಗೂ ಶಾಸ್ತ್ರಜಾಲ ಶೀರ್ಷಿಕೆಯಡಿ ವಿಚಾರಗಳಿದ್ದರೆ, ಸಮನ್ವಯ ಖಂಡದಲ್ಲಿ ಭ್ರಮಶೋಧನ, ಮತ್ತೆ ಮತ್ತೆ ಊಟ ಮತ್ತೆ ಮತ್ತೆ ಹಸಿವು, ಸಾಧನೆ ಪ್ರಯತ್ನ, ಪ್ರಥಮ ಪರಿಚಯ, ಜೀವನ ಸಾಮರಸ್ಯ, ರೌದ್ರಕರುಣೆ, ಪ್ರಗಾಢಸ್ಪರ್ಶ ಶೀರ್ಷಿಕೆಗಳಡಿ ವಿಚಾರ ಮಂಡಿಸಲಾಗಿದೆ.
©2024 Book Brahma Private Limited.