‘ಸುಂದರಕಾಂಡ ಸುಂದರ’ ಕೆ.ಜಿ ರಾಘವನ್ ಅವರ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಎಂ.ಸಿ. ಪ್ರಕಾಶ್ ಅವರು ಅನುವಾದ ಮಾಡಿದ್ದಾರೆ. ಇದಕ್ಕೆ ಲೇಖಕರ ಬೆನ್ನುಡಿ ಬೆಹವಿದೆ: ಪ್ರವೃತ್ತಿಯಿಂದ ಕಾನೂನುತಜ್ಣರಾದ ಶ್ರೀ ರಾಘವನ್ ಅವರು ಪ್ರವೃತ್ತಿಯಿಂದ ರಾಮಾಯಣವಾಚಕರು, ಅದರ ಉಪಾಸಕರು ಮತ್ತು ರಾಮಾಯಣದ ಸಂದೇಶ ಇಂದಿನ ಜನರಿಗೆ ತಲುಪಬೇಕೆಂಬ ಹಂಬಲವುಳ್ಳವರು, ಅದಕ್ಕಾಗಿ ತಮ್ಮ ತನು-ಮನ-ಧನಗಳನ್ನು ಅರ್ಪಿಸಿಕೊಂಡರು. ಹಲವು ವರ್ಷಗಳಿಂದ ರಾಮಾಯಣದ ಮೇಲೆ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ ಎಂಬುವುದನ್ನು ನಾನು ಕೇಳಿ ತಿಳಿದಿದ್ದೇನೆ, ಅದಕ್ಕಾಗಿ ಅವರನ್ನು ಮೆಚ್ಚಿದ್ದೇನೆ. ಮೂಲ ‘ವಾಲ್ಮಿಕಿ ರಾಮಾಯಣ’ವಲ್ಲದೆ, ‘ಆಧ್ಯಾತ್ಮ ರಾಮಾಯಣ’. ‘ತುಲಸೀ ರಾಮಾಯಣ’, ಶ್ರೀ ರಾಮಾಯಣ ದರ್ಶನಂ’ ಮತ್ತಿತರ ರಾಮಾಯಣಾಧಾರಿತ ಕಾವ್ಯಗಳನ್ನು ಯಥಾಶಕ್ತಿ ಅಧ್ಯಯನ ಮಾಡಿದ್ದಾರೆ. ಅವುಗಳ ಆಧಾರದ ಮೇಲೆ ರಾಮಾಯಣದ ತಮ್ಮ ಓದನ್ನು ಬೆಳೆಸಿಕೊಂಡಿದ್ದಾರೆ. ಅದನ್ನು ಉತ್ಸಾಹ, ಉಲ್ಲಾಸ, ಭಕ್ತಿಗಳಿಂದ ಜನರೊಂದಿಗೆ ಹಂಚಿಕೊಳ್ಳುತ್ತಾರೆ. ಒಬ್ಬ ಹನುಮಂತನ ಪಾತ್ರವೆಂದರೆ ಅವರಿಗೆ ಆತನ ಹೆಸರಿನ ಮೂಲ, ಆತನ ಹುಟ್ಟಿನ ಮೂಲ, ಆತನ ಶಕ್ತಿಯ ಮೂಲ ಇವುಗಳನ್ನು ಅರಿಯುವ ಸಂಶೋಧಕನ ತಣಿಯದ ಕುತೂಹಲ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2025 Book Brahma Private Limited.