ಲೇಖಕ ಗುರು ಸಕಲಮಾ ಅವರು ಚದುರಿದ ಚಿತ್ರಗಳಂತಿದ್ದ ಅನುಭವಗಳನ್ನು ಕ್ರೋಡಿಕರಿಸಿ ಒಂದು ಪುಸ್ತಕ ರೂಪಕ್ಕೆ ತಂದು ಬರೆದಿರುವ ಕೃತಿಯೇ “ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು “ಸಕಾಲಿಕ ಮತ್ತು ಕಾಲತೀತ. ಇವರು ಕಲೆ ಹಾಕಿರುವ ಮೂರು ದಶಕಗಳಿಗೂ ಅಧಿಕ ಅವಧಿಯ ಅಧ್ಯಾತ್ಮಿಕ ಅನುಭವ ಕಮಲಪುಷ್ಪ-1,2 ಹೀಗೆ 9 ವಿಭಾಗವಾಗಿ ವಿಂಗಡಿಸಿದ್ದು, ಸರಿ ಸುಮಾರು 300 ಪುಟಗಳಿಂದ ಹೊರ ಹೊಮ್ಮಿದೆ. ದೇಹ ಅಳಿದು ಹಲವು ವರ್ಷಗಳಾದರೂ ನೆನೆದಾಗ ಕಾಣಿಸಿಕೊಂಡು ಮಾರ್ಗದರ್ಶನ ಮಾಡುವ ಹಿಮಾಲಯದ ಯೋಗಿ ಸ್ವಾಮಿ ರಾಮ. ತಮಿಳುನಾಡಿನ ಪ್ರಾಚೀನ ದೇವಾಲಯದಲ್ಲಿ ಕಾಣಿಸಿಕೊಂಡು ಆಧ್ಯಾತ್ಮಿಕ ರಹಸ್ಯಪಥ ಚಂದ್ರವಿದ್ಯೆಯ ಕುರುಹು ತೋರಿದ ಋಷಿ ಅಗಸ್ಯರು. ರೈಲಿನಲ್ಲಿ ಕಾಣಿಸಿಕೊಂಡು ಎಚ್ಚರಿಸಿದ ಪರಮಹಂಸ ಯೋಗಾನಂದರು. ಕೋಪವಿಲ್ಲದ ಕರುಣಾಮೂರ್ತಿಯಾಗಿ ಕಾಣಿಸಿಕೊಳ್ಳುವ ಅತ್ರಿನಂದನ ಮುನಿ ದುರ್ವಾಸರು. ಅಕ್ಷರಶಃ ರುಂಡ ಕಡಿದ ಅನುಭವ ದಯಪಾಲಿಸುವ ಛಿನ್ನಮಸ್ತಾ ದೇವಿಯ ರಹಸ್ಯ-ಹೀಗೆ ಮೈ ನವಿರೇಳಿಸುವ ಆಧ್ಯಾತ್ಮಿಕ ಅನುಭವಗಳು ಈ ಕೃತಿಯಲ್ಲಿ ಸಾಲುಗಟ್ಟಿ ಬರುತ್ತವೆ.ಆಧ್ಯಾತ್ಮದಲ್ಲಿ ಆಸಕ್ತಿ ಉಳ್ಳವರು,ಗೃಹಿಣಿಯರು,ಹಿರಿಯರು ಓದುವಂತಹ ಪುಸ್ತಕ ಇದಾಗಿದೆ.
©2025 Book Brahma Private Limited.