ಮಹಾಲಿಂಗರಂಗನ ಅನುಭವಾಮೃತ ಕುರಿತು ವಿಜಯವಾಣಿ ಪತ್ರಿಕೆಯ ’ಅನುಭಾವದ ಬೆಳಗು’ ದಲ್ಲಿ ಬರೆದ ಅಂಕಣ ಬರೆಹವೇ ’ಉತ್ತರಯಾನ ಅಧ್ಯಾತ್ಮಿಕಾನುಸಂಧಾನ’. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಕೃತಿಯ ಕರ್ತೃ. ಅಂತರ್ ಜ್ಯೋತಿಯನ್ನು ಅಂಗೈ ನೆಲ್ಲಿಕಾಯಿಯಾಗಿಸುವ ಪರಿ ಹೇಗೆ ಎಂಬುದನ್ನು ತೋರುವ ಮಹಾಪಥಿಕನ ಯಾನವೇ ”ಉತ್ತರಯಾನ’ ವಾಗಿದೆ. ಮಹಾಲಿಂಗರಂಗನೊಂದಿಗೆ ಮುಖಾಮುಖಿಯಾಗುತ್ತಾ ಆತನ ರೂಪಕ ಭಾಷೆಯನ್ನು ಸರಳವಾಗಿ ದಾಖಲಿಸುವ ಪ್ರಯತ್ನ ಇಲ್ಲಿದೆ. ಸಂಯಮ ಮೀರದ ಶಾಸ್ತ್ರ ಭಾಷೆ, ನಾದಲಯ ತುಂಬಿಕೊಂಡು, ಹಿತವಾಗುವ ಕಾಂತಾಸಂಹಿತ ಹಿತೋಕ್ತಿ ವಿಧಾನ, ಕೊನೆಯ ಟಿಪ್ಪಣಿಗಳ ಲೋಕದರ್ಶನ ಈ ಕೃತಿಯ ಧನಾತ್ಮಕ ಅಂಶಗಳು.
©2025 Book Brahma Private Limited.