‘ಗುರುವೇ ಅರಿವಾದಾಗ’ ಲೇಖನ ಎನ್.ಎಸ್. ಶ್ರೀಧರಮೂರ್ತಿ ಅವರ ಕೃತಿ. ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಜೀವನ-ಬೋಧನೆ ದಾಖಲಿಸಲಾಗಿದೆ. ವಿದ್ವಾನ್ ಎನ್. ರಂಗನಾಥಶರ್ಮ ಅವರು ಕೃತಿಗೆ ಬೆನ್ನುಡಿ ಬರೆದು ‘ಶ್ರೀ ಶಂಕರಭಗವಾತ್ಪಾದರಿಂದ ಈಚೆಗೆ ಸಹ ಬ್ರಹ್ಮ ಜ್ಞಾನಿಗಳೂ ಜೀವನ್ಮುಕ್ತರೂ ಆದ ಎಷ್ಟೋ ಮಹಾತ್ಮರು ಈ ಭರತಭೂಮಿಯಲ್ಲಿ ಆಗಿ ಹೋಗಿದ್ದಾರೆ. ಕೆಲವರು ಇತಿಹಾಸ ಪ್ರಸಿದ್ಧರು, ಇನ್ನು ಕೆಲವರು ನಮಗೆ ಅತ್ಯಂತ ಸಮೀಪ ಕಾಲದಲ್ಲಿದ್ದವರು. ಅಂತಹವರಲ್ಲೊಬ್ಬರಾದ ಸದ್ಗುರು ಶ್ರೀ ಶಂಕರಲಿಂಗ ಭಗವಾನರ ಜೀವನ ಮತ್ತು ವಿಚಾರಗಳು. ಈ ಪುಸ್ತಕದಲ್ಲಿ ಸಂಕ್ಷೇಪವಾಗಿ ಹಾಗೇ ತಲಸ್ಪರ್ಶಿಯಾಗಿ ಬಂದಿವೆ. ಆದರ್ಶ ಮಹಾಪುರುಷರೊಬ್ಬರ ಚಿತ್ರಣ ಕಣ್ಣಿಗೆ ಕಟ್ಟುವಂತಿದ್ದು, ಇಂಥ ಬ್ರಹ್ಮಜ್ಞಾನಿಗಳು ರಾಷ್ಟ್ರದ ಸಂಪತ್ತು, ವಿಶ್ವದ ಸಂಪತ್ತು ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.