ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ನಳ ದಮಯಂತೀ. ಈ ಎರಡೂ ಪಾತ್ರಗಳ ವಿವಾಹ ಮಹೋತ್ಸವವೇ ಇವರು ಮುಂದೆ ಅನುಭವಿಸಬೇಕಾದ ಎಲ್ಲ ದುರ್ಘಟನೆಗಳಿಗೆ ಕಾಣವಾಗುತ್ತದೆ. ಆದರೂ, ತಾವು ನಂಬಿದ ತತ್ವ, ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ನಡೆದುಕೊಂಡು ಬರುವುದೇ ಇಲ್ಲಿಯ ಜೀವಾಳ. ಜೀವನದಲ್ಲಿ ಕಾಣದ ಕೈಯ ಕೈವಾಡ ಹೇಗಿರುತ್ತದೆ.. ಅದು ನಮಗೇ ತಿಳಿಯದೇ ಹಾಗೇ ಬದುಕಿನ ಪ್ರತಿ ಕ್ಷಣದಲ್ಲೂ ಅಡ್ಡಿಯಾಗುತ್ತದೆ. ಕಾಣದ ಕೈಯು ಹೀಗೆ ಮಾಡುವುದಕ್ಕೆ ಕಾರಣಗಳೇನು? ಇವ್ಯಾವುದಕ್ಕೂ ಸೂಕ್ತ ಉತ್ತರ ಸಿಗದಿದ್ದರೂ, ಕಾಣದ ಕೈಯ ಅನುಭವ ಮಾತ್ರ ನಮ್ಮ ಬದುಕಿನುದ್ದಕ್ಕೂ ಆಗುತ್ತಿರುತ್ತದೆ. ಇದನ್ನು ತಳ್ಳಿ ಹಾಕುವಂತಿಲ್ಲ. ಇಂತಹ ಸಂದೇಶ ನೀಡುವ ಕೃತಿಯು ನಳ-ದಮಯಂತಿ. ಕಾಣದ ಕೈ ಏನೇ ಮಾಡಲಿ; ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕು ಸಾಗಿಸಿದ ಈ ನಳ-ದಮಯಂತಿಯ ದಾಂಪತ್ಯ ಜೀವನ ಸಂದೇಶ ನೀಡುವುದಾಗಿದೆ.
©2024 Book Brahma Private Limited.