ಸಾಹಿತಿ ಕೆ.ಎಸ್. ನಾರಾಯಣಾಚಾರ್ಯ ಅವರು ವೇದ ಸಂಸ್ಕೃತಿಯ ಕುರಿತಂತೆ ಬರೆದ 1 ರಿಂದ 3 ಸಂಪುಟಗಳನ್ನು ಒಳಗೊಂಡ ಕೃತಿ ಇದು. ವೇದಗಳು ನಮ್ಮ ಸನಾತನ ಧರ್ಮದ ತಳಹದಿ. ಅವು ಮನುಷ್ಯನ ನಡಾವಳಿಕೆ, ಚಿಂತನೆಗಳನ್ನು ನಿರ್ದೇಶಿಸುತ್ತವೆ. ಅವುಗಳ ಉದ್ದೇಶ ಮನುಕುಲದ ಉದ್ಧಾರವೇ ಆಗಿದೆ. ಆದರೆ, ಕಾಲಕ್ಕೆ ಅನುಗುಣವಾಗಿ ಅವುಗಳ ಅರ್ಥಗಳನ್ನು ಗ್ರಹಿಸುವುದು ಅಗತ್ಯ. ತಪ್ಪಿದರೆ, ಅವುಗಳ ಮಹತ್ವವು ಗೌಣವಾಗುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ಅವು ತೀರಾ ಸನಾತನ ಹಾಗೂ ಪುರಾತನ ಚಿಂತನೆಗಳಾಗಿವೆ. ಆಯಾ ಕಾಲದಲ್ಲೇ ಅವುಗಳನ್ನಿಟ್ಟು, ವಿಶ್ಲೇಷಿಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ, ವೇದ ಸಂಸ್ಕೃತಿಯ ಪರಿಪೂರ್ಣ ಚಿತ್ರಣವನ್ನು ಲೇಖಕರು ಇಲ್ಲಿ ಸಂಗ್ರಹಿಸಿದ್ದಾರೆ.
©2024 Book Brahma Private Limited.