‘ಆತ್ಮಾನ್ವೇಷಣೆ’ ಕೃತಿಯು ವಿ. ಎಂ ಉಪಾಧ್ಯಾಯ ಅವರ ಶಾಸ್ತ್ರಗ್ರಂಥ ಕೃತಿಯಾಗಿದೆ. ಅಹರ್ನಿಶಿ ಸಂಪತ್ತಿಗಾಗಿ ಕೀರ್ತಿಗಾಗಿ, ಸುಖಲಾಭಕ್ಕಾಗಿ ಕರ್ಮ ಮಾಡುತ್ತಿದ್ದರೂ ತನ್ನ ಕರ್ಮಗಳ ಅಗೋಚರ ಫಲಗಳನ್ನು ಕುರಿತು ಚಿಂತಿಸುವುದಿಲ್ಲ ಕರ್ಮಗಳು ಇಹ-ಪರಗಳಲ್ಲಿ ಕೊಡುವ ಫಲಗಳನ್ನು ವಿವೇಚಿಸಿ ಅಭ್ಯುದಯಕ್ಕೆ ಕಾರಣವಾಗುವ ಕರ್ಮಗಳನ್ನೇ ಮಾಡಲು ಶಾಸ್ತ್ರಗಳು ಹೇಗೆ ಮಾರ್ಗದರ್ಶನ ಮಾಡುತ್ತವೆ ಎಂದು ವಿವರಿಸಲಾಗಿದೆ.
ಪಂಚಯಜ್ಞಗಳನ್ನು ವಿವರಿಸಿ ಅವುಗಳ ಅನುಷ್ಠಾನದಿಂದ ಹೇಗೆ ಪಾಪಮುಕ್ತರಾಗಬಹುದೆಂದು ತಿಳಿಸಲಾಗಿದೆ. ಬ್ರಹ್ಮಪದ ಶಬ್ದ ಉದ್ದೇಶ ಮತ್ತು ಅರ್ಥಗಳನ್ನು ವಿವರಿಸಿ ಬ್ರಹ್ಮಚಾರಿಗಳ ಕರ್ತವ್ಯಗಳನ್ನು ತಿಳಿಸಲಾಗಿದೆ. ವಿವಾಹದ ಅರ್ಥ, ಅದರ ಪಾವಿತ್ರವನ್ನು ತಿಳಿಸಿ, ಸುಖೀ ದಾಂಪತ್ಯಕ್ಕೆ ದಾರಿ ತೋರುವುದು ಕೃತಿಯ ಉದ್ದೇಶವೂ ಆಗಿದೆ.
©2025 Book Brahma Private Limited.