ಗೀತೆಯ ಗುಟ್ಟು ಅಥವಾ ಪರಮಾತ್ಮ ಯೋಗವು-ಕೃತಿಯನ್ನು ರಂಗನಾಥ ದಿವಾಕರ ಅವರು ಬರೆದಿದ್ದಾರೆ. ಜೀತೇಂದ್ರಿಯನಾಗಬೇಕು. ವಿಷಯಾನಂದವನ್ನು ತೊರೆದು ಆತ್ಮಾನಂದವನ್ನು ಪಡೆಯಲು ಹಂಬಲಿಸಬೇಕು. ಅಹಂ ಅಳಿದು ಪರಮಾತ್ಮನಿಗೆ ಸರ್ವಸ್ವವನ್ನು ಸಮರ್ಪಿಸಿಕೊಳ್ಳಬೇಕು ಎಂಬುದು ಗೀತೆಯ ಮುಖ್ಯ ಸಾರ. ಗೀತೆಯೂ ಸದ್ಯದ ಸ್ಥಿತಿಯೂ, ಗೀತೆಯೂ ಕರ್ನಾಟಕವೂ, ಗೀತೆಯೂ ಮಹಾತ್ಮವೂ.. ಹೀಗೆ ವಿವಿಧ ವಿಷಯಗಳೊಂದಿಗೆ ಅಂತರ್ ಶಿಸ್ತೀಯವಾಗಿ ಅಧ್ಯಯನಕ್ಕೊಳಪಡಿಸಿದ ಮಹತ್ವದ ಕೃತಿ ಇದು. ಗೀತೆಯು ಸರ್ಕಾವವನ್ನೂ ತ್ಯಾಗ ಮಾಡಿ ಕಾಡು ಸೇರಿ ಎಂದು ಹೇಳುವುದಿಲ್ಲ. ಕರ್ಮ ಸನ್ಯಾಸವನ್ನು ತೆಗೆದುಕೊಳ್ಳಬೇಕು ಎಂದು ಹೇಳುವುದಿಲ್ಲ. ನಿಮಗೆ ಆತ್ಮಾನಂದವನ್ನು ಮಾಡುತ್ತೇನೆ. ಇಂತಿಂಥಹ ಮಾರ್ಗ ಅನುಸರಿಸಿರಿ ಎಂದು ಮಾರ್ಗದರ್ಶನ ಮಾಡುತ್ತದೆ . ಇಂತಹ ವಿಚಾರ-ಚಿಂತನೆಗಳು ಕೃತಿಯಲ್ಲಿ ಒಳಗೊಂಡಿದೆ.
©2024 Book Brahma Private Limited.