ರಂಗಸಾಂಗತ್ಯ

Author : ವಿಜಯಾ

Pages 154

₹ 180.00




Year of Publication: 2012
Published by: ಇಳಾ ಪ್ರಕಾಶನ
Address: ರಾಘವ ನಗರ, ನ್ಯೂ ಟಿಂಬರ್‌ಯಾರ್ಡ್ ಲೇಔಟ್, ಬೆಂಗಳೂರು- 560026

Synopsys

‘ರಂಗಸಾಂಗತ್ಯ’ ಕೃತಿಯು ವಿಜಯಾ ಅವರ ರಂಗಭೂಮಿ ಕುರಿತ ಲೇಖನಗಳ ಸಂಗ್ರಹವಾಗಿದೆ. ರಂಗಭೂಮಿಗೆ ಸಂಬಂಧಿಸಿದ ಒಂದು ಸಮ್ಯಕ್ತ ದರ್ಶನವನ್ನು ನೀಡಬಲ್ಲ ಲೇಖನಗಳು ಇಲ್ಲಿವೆ. ನಾಟಕದ ಕಥಾವಸ್ತುವಿನಿಂದ ಅದರ ಅಂತಃಸತ್ವವನ್ನು ಹೆಕ್ಕಿ ವಿವರಿಸುವ, ನಟವರ್ಗ-ನಿರ್ದೆಶಕರಲ್ಲಿನ ಅಂತಕರಣ- ವ್ಯಕ್ತಿತ್ವವನ್ನು ಪರಿಚಯಿಸುವ, ಬೀದಿನಾಟಕಗಳನ್ನು ಜನರು ಸ್ವೀಕರಿಸಿದಂತೆಯೇ ನಿರಾಕರಿಸಿದ ಕಾರಣವನ್ನು ಹುಡುಕುವ ಸತ್ವಪೂರ್ಣ ಬರಹ, ಕಾಲ ಬದಲಾದಂತೆ, ಬುದ್ಧಿಜೀವಿ ವರ್ಗ ಮರೆಯಾದಂತೆ ಯಾವುದೇ ಸಾಂಕೇತಿಕತೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳಲಾಗದ ಪ್ರೇಕ್ಷಕ ಎದುರಾದಾಗ ಮಾಧ್ಯಮಗಳ ಪಾತ್ರ ಅತ್ಯಂತ ಶೋಚನೀಯ. ಇಲ್ಲಿ ಲೇಖಕಿ ರಂಗಕಲೆಯ ಉತ್ತುಂಗದ ದಿನಗಳನ್ನು ಸ್ಮರಿಸಿಕೊಳ್ಳುತ್ತಇಂದು ಕಲಾಪ್ರಕಾರಗಳು ಬಳಕೆಯಾಗುವ ಸನ್ನಿವೇಶವನ್ನು ನಮ್ಮರಿವಿಗೆ ತಂದಿದ್ದಾರೆ.

About the Author

ವಿಜಯಾ

ನಾಡಿನ ಹೆಸರಾಂತ ಪತ್ರಕರ್ತೆ, ಪ್ರಕಾಶಕಿಯಾಗಿರುವ ವಿಜಯಾ ಅವರು ದಾವಣಗೆರೆಯವರು. ಅವರು 1942 ಮಾರ್ಚಿ 10ರಲ್ಲಿ ಶ್ಯಾಮಭಟ್, ಸರೋಜಮ್ಮ ಅವರ ಮಗಳಾಗಿ ಜನಿಸಿದರು. ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಪದವಿ ಪಡೆದ ಅವರು ಇಳಾ ಮುದ್ರಣವನ್ನು ಪ್ರಾರಂಭಿಸಿದ್ದಾರೆ. ‘ಪರ್ವ ಒಂದು ಸಮೀಕ್ಷೆ, ಇನಾಂದಾರ್: ವ್ಯಕ್ತಿ, ಕೃತಿ, ಇಂದಿನ ರಂಗಕಲಾವಿದರು (ಕನ್ನಡ ರಂಗಭೂಮಿ ಕಲಾವಿದರ ಮಾಹಿತಿ), ರಂಗ ಚಿಂತನೆ, ಕನ್ನಡ ಸಿನೆಮಾ ಸ್ವರ್ಣಮಹೋತ್ಸವ, ಮಕ್ಕಳ ಸಿನೆಮಾ, ಚಲನಚಿತ್ರರಂಗದ ೧೪ ವ್ಯಕ್ತಿ ಚಿತ್ರಣ, ಕಿರಿಯರ ಕರ್ನಾಟಕ, ಪದಾಂತರಂಗ (ಎನ್.ಕೆ. ಪದ್ಮಾದೇವಿ ಬದುಕು-ಬರಹ ಲೇಖನ ಸಂಗ್ರಹ), ಅಕ್ಕರೆ (ಎನ್. ವ್ಯಾಸರಾಯ ಬಲ್ಲಾಳರ ಅಭಿನಂದನಾ ಗ್ರಂಥ), ಕನ್ನಡ ಚಲನಚಿತ್ರ ...

READ MORE

Reviews

(ಹೊಸತು, ಜುಲೈ 2012, ಪುಸ್ತಕದ ಪರಿಚಯ)

ರಂಗಭೂಮಿಯ ಬಗ್ಗೆ ಅಪಾರ ಒಲವು ಮತ್ತು ಶ್ರದ್ಧೆ ತೋರುವ ವಿಜಯಾ ಅವರ ಲೇಖನಗಳ ಸಂಗ್ರಹ. ಕೆಲವು ದಶಕಗಳ ಹಿಂದೆ ಸದಭಿರುಚಿಯ ನಾಟಕಗಳ ಪ್ರದರ್ಶನ ಎಲ್ಲರ ಮೆಚ್ಚುಗೆ ಗಳಿಸಿದ್ದು ಅವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಉದ್ದೇಶ ಹೊಂದಿದ್ದವು. ಹೆಸರಾಂತ ನಾಟಕ ಕಂಪೆನಿಗಳು ಇದ್ದವು. ನಾಟಕಗಳೂ ದೃಶ್ಯಮಾಧ್ಯಮವೇ ಆದರೂ ಸುಧಾರಿತಗೊಂಡು ಚಲನಚಿತ್ರವಾಗಿ ಪರಿವರ್ತಿತವಾದಾಗ ಜನರ ಒಲವು ಅತ್ತ ತಿರುಗಿ ಸ್ವಲ್ಪ ಮಟ್ಟಿಗೆ ನಾಟಕಗಳು ಹಿನ್ನಡೆ ಕಂಡವು. ಆದರೂ ರಂಗನಾಟಕಗಳ ಸೊಗಸನ್ನು - ಜೀವಂತಿಕೆಯನ್ನು ಕಂಡವರು ಮಾತ್ರ ಇಲ್ಲಿನ ಲೇಖನಗಳನ್ನು ಬರೆಯಬಲ್ಲರು. ರಂಗಭೂಮಿಗೆ ಸಂಬಂಧಿಸಿದ ಒಂದು ಸಮ್ಯಕ್ ದರ್ಶನವನ್ನು ನೀಡಬಲ್ಲ ಲೇಖನಗಳಿವು. ನಾಟಕದ ಕಥಾವಸ್ತುವಿನಿಂದ ಅದರ ಅಂತಃಸತ್ವವನ್ನು ಹೆಕ್ಕಿ ವಿವರಿಸುವ, ನಟವರ್ಗ-ನಿರ್ದೆಶಕರಲ್ಲಿನ ಅಂತಕರಣ- ವ್ಯಕ್ತಿತ್ವವನ್ನು ಪರಿಚಯಿಸುವ, ಬೀದಿನಾಟಕಗಳನ್ನು ಜನರು ಸ್ವೀಕರಿಸಿದಂತೆಯೇ ನಿರಾಕರಿಸಿದ ಕಾರಣವನ್ನು ಹುಡುಕುವ ಸತ್ವಪೂರ್ಣ ಬರಹ, ಕಾಲ ಬದಲಾದಂತೆ, ಬುದ್ಧಿಜೀವಿ ವರ್ಗ ಮರೆಯಾದಂತೆ ಯಾವುದೇ ಸಾಂಕೇತಿಕತೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳಲಾಗದ ಪ್ರೇಕ್ಷಕ ಎದುರಾದಾಗ ಮಾಧ್ಯಮಗಳ ಪಾತ್ರ ಅತ್ಯಂತ ಶೋಚನೀಯ. ಇಲ್ಲಿ ಲೇಖಕಿ ರಂಗಕಲೆಯ ಉತ್ತುಂಗದ ದಿನಗಳನ್ನು ಸ್ಮರಿಸಿಕೊಳ್ಳುತ್ತಇಂದು ಕಲಾಪ್ರಕಾರಗಳು ಬಳಕೆಯಾಗುವ ಸನ್ನಿವೇಶವನ್ನು ನಮ್ಮರಿವಿಗೆ ತಂದಿದ್ದಾರೆ.

 

Related Books