ಸೌಂದರ್ಯ ಪ್ರಜ್ಞೆ ಎಂಬುದು ಇಂಗ್ಲಿಷಿನಲ್ಲಿ aesthetics ಎಂದು ಕರೆಯಲಾಗುವ ಸೌಂದರ್ಯಶಾಸ್ತ್ರದ ಭಾಗ. ಯಾವುದೇ ಕಲಾ ಪ್ರಕಾರದ ಅವಿಭಾಜ್ಯ ಅಂಗ. ವಾಸ್ತುಶಿಲ್ಪವೇ ಇರಲಿ, ಕಾದಂಬರಿಯೇ ಇರಲಿ, ನೃತ್ಯವೇ ಆಗಿರಲಿ ಅದು ಕಲಾತ್ಮಕವಾಗಿದೆಯೇ ಎಂಬುದನ್ನು ಅಳೆಯಲು ಸಾಧ್ಯವಾಗುವುದು ’ಸೌಂದರ್ಯ ಪ್ರಜ್ಞೆ’ಯಿಂದ.
ಬಹುಶ್ರುತ ವಿದ್ವಾಂಸರಾದ ಪ್ರೊ. ಎಂ.ಎಚ್. ಕೃಷ್ಣಯ್ಯನವರು ಬರೆದ ’ರಂಗಭೂಮಿ ಮತ್ತು ಸೌಂದರ್ಯದ ಪ್ರಜ್ಞೆ’ ಪಾಶ್ಚಾತ್ಯರಲ್ಲಿ ಸೌಂದರ್ಯ ಜ್ಞಾನ, ಭಾರತೀಯ ನಾಟಕಗಳ ಸೌಂದರ್ಯ ಪ್ರಜ್ಞೆಯನ್ನು ವಿವರಿಸುತ್ತದೆ. ಸೌಂದರ್ಯ ಪ್ರಜ್ಞೆಯನ್ನು ಪರಿಚಯಿಸುತ್ತ ಸಾಗುವ ಕೃತಿ ಕಲೆ ಮತ್ತು ಸೌಂದರ್ಯ, ರೂಪಕ ಜಗತ್ತು, ಕಲಾನುಭವ, ಸಂಜ್ಙಾ ಶಾಸ್ತ್ರ ಮುಂತಾದ ಸಂಗತಿಗಳ ಬಗ್ಗೆ ಚರ್ಚಿಸುತ್ತದೆ.
©2025 Book Brahma Private Limited.