ನಾಟಕ ಪ್ರಯೋಗದಲ್ಲಿ ಸಂಘಟನಕಾರ ಬಹಳ ಪ್ರಮುಖ ಪಾತ್ರವಹಿಸುತ್ತಾರೆ. ಈ ಸಂಘಟನೆಕಾರ ತನ್ನ ಕಾರ್ಯದಲ್ಲಿ ಎಷ್ಟು ಸಮರ್ಥನು ಅನ್ನುವುದರ ಮೇಲೆ ನಾಟಕದ ಯಶಸ್ಸು, ನಾಟಕದ ಗುಣಮಟ್ಟ ಅವಲಂಬಿಸಿರುತ್ತದೆ. ಪ್ರಯೋಗಕ್ಕೆ ಇಂತಹ ನಾಟಕ ಅನ್ನುವುದನ್ನು, ನಾಟಕ ತಂಡ ಗೊತ್ತುಮಾಡಿದ ಮೇಲೆ, ಸಂಘಟನಕಾರ ಕ್ರಿಯಾಶೀಲನಾಗುತ್ತಾನೆ. ತಾಲೀಮು ಕೊಠಡಿ ಗೊತ್ತುಪಡಿಸುವುದು, ವಿವಿಧ ಪಾತ್ರಗಳ ಆಯ್ಕೆಯ ಸಲುವಾಗಿ ನಟರನ್ನು ಕೂಡಿಸುವುದು, ಥಿಯೇಟರ್ ಗೊತ್ತುಪಡಿಸಿ ಪ್ರಚಾರ ಕೊಟ್ಟು, ವಿವಿಧ ತಂತ್ರಜ್ಞರನ್ನು ಕಲೆ ಹಾಕಿ, ಸಿದ್ಧಗೊಂಡ ನಾಟಕ ರಂಗವೇರಿ, ಅದರ ಯಶಸ್ವೀ ಮುಕ್ತಾಯ ಆಗುವವರೆಗೂ ಆತನ ಪ್ರಯತ್ನ ಮುಂದುವರಿದಿರುತ್ತದೆ. ಪ್ರಸ್ತುತ ಕೃತಿಯು ರಂಗ ಸಂಘಟನೆಕಾರರನ್ನು ಪರಿಚಯಿಸುವ ಕೃತಿಯಾಗಿದೆ. ಕೆ.ವಿ. ನಾಗರಾಜಮೂರ್ತಿ ಹಾಗೂ ಬಿ.ಟಿ. ಮುನಿರಾಜಯ್ಯ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.