ಮಹಾಕವಿ ಕುವೆಂಪು ಅವರ ಪ್ರತಿಭೆ ಕೇವಲ ಕವಿತೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಹಾಕಾವ್ಯ-ಮಹಾಕಾದಂಬರಿಗಳ ಹಾಗೆ ಪುಟ್ಟಪ್ಪನವರು ಸಣ್ಣಕತೆ, ಕವಿತೆ, ನಾಟಕ ಪ್ರಕಾರಗಳಲ್ಲಿಯೂ ಅನನ್ಯ ಸಾಧನೆ ಮಾಡಿದ್ದಾರೆ.
ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ಚಂದ್ರಹಾಸ, ಬಿರುಗಾಳಿ, ಶೂದ್ರ ತಪಸ್ವಿ ಮತ್ತಿತರ ನಾಟಕಗಳು ಕನ್ನಡ ನಾಟಕ-ರಂಗಭೂಮಿಗೆ ನೀಡಿದ ಮಹತ್ವದ ಕೊಡುಗೆಗಳಾಗಿವೆ. ಉತ್ಥಾನ ಬಾರೀಘಾಟ್ ಅವರು ಕುವೆಂಪು ಅವರ ನಾಟಕಗಳ ಮೂಲಕ ರಂಗದ ಪರಿಕಲ್ಪನೆಯನ್ನು ಕಟ್ಟಿಕೊಡಲು ಈ ಕೃತಿಯಲ್ಲಿ ಪ್ರಯತ್ನ ಮಾಡಿದ್ದಾರೆ. ಕುವೆಂಪು ಅವರ ರಂಗಭೂಮಿಯ ಚಿಂತನೆಗಳನ್ನು ಅವರದೇ ನಾಟಕಗಳ ಮೂಲಕ ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
©2024 Book Brahma Private Limited.