‘ರಂಗ ಅನ್ವೇಷಣೆ ಪೀಟರ್ ಬ್ರೂಕ್‍ನ ಪ್ರಯೋಗಗಳು’ ಕೃತಿಯು ಕೆ.ವಿ ಅಕ್ಷರ ಅವರ ಬ್ರೂಕ್‍ನ ರಂಗಸಂಶೋಧನೆಯನ್ನು ಪರಿಚಯಿಸುವಂಹ ಕೃತಿಯಾಗಿದೆ. ಪಾಶ್ಚಾತ್ಯ ರಂಗಭೂಮಿಯ ಹೊಸ ಪ್ರಯೋಗಗಳೆಲ್ಲವೂ ಒಂದು ಘಟ್ಟ ತಲುಪಿ ಸ್ಥಗಿತಗೊಳ್ಳುತ್ತಿದ್ದ ಸಂದರ್ಭದಲ್ಲಿ, ರಂಗಭೂಮಿಯ ಉದ್ದೇಶ ಹಾಗೂ ಕ್ರಿಯಾಮಾರ್ಗಗಳನ್ನು ಮೂಲಭೂತವಾಗಿ ಹೊಸದಾಗಿ ಶೋಧಿಸಿಕೊಳ್ಳಲು ಪ್ರಯತ್ನಿಸಿದ ಹಾಗೂ ಆ ಮೂಲಕ ವಿಶ್ವದ ರಂಗಪ್ರಿಯರ ಆಸಕ್ತಿಯನ್ನು ಸೆಳೆದ ಪೀಟರ್ ಬ್ರೂಕ್‍ನ ರಂಗಶೋಧನೆಯನ್ನು ಸ್ಥೂಲವಾಗಿ ಪರಿಚಯಿಸಿಕೊಡುವ ಕಿರುಪುಸ್ತಕ ಇದಾಗಿದೆ. ಪೀಟರ್ ಬ್ರೂಕ್‍ನ ಪ್ರಯೋಗಗಳನ್ನು ಕೆಂದ್ರವಾಗಿಟ್ಟುಕೊಂಡು ಅದರ ಹಿನ್ನೆಲೆಯ ವ್ಯಾಪ್ತಿಯನ್ನು ವಿವರಿಸುವ ಬರಹ ಈ ಕೃತಿಯಲ್ಲಿದೆ. ಪ್ರಸ್ತುತ ಭಾರತದ ರಂಗಭೂಮಿಗು ಗಮನವನ್ನು ಈ ಕೃತಿಯು ಕೊಟ್ಟಿರುತ್ತದೆ.
©2024 Book Brahma Private Limited.