'ಉಲ್ಲಾಸ' ಬಿಡಿ ಬರಹಗಳ ಸಂಕಲನ. ಈ ಕೃತಿಯು ಸಾಹಿತ್ಯ, ರಂಗಭೂಮಿ, ರಾಜಕೀಯ, ಧಾರ್ಮಿಕ, ವಿಜ್ಞಾನ, ಇತ್ಯಾದಿ ವಿಷಯ ವಿಚಾರಗಳಿಗೆ ಸಂಬಂಧಿಸಿದ ಕೃತಿ-ಸಂಗತಿಗಳನ್ನು ಕುರಿತ ಸೂಕ್ಷ್ಮ ನಿರೀಕ್ಷಣೆ ಇದೆ.
ಪಠ್ಯ ಕೇಂದ್ರಿತವಾಗಿ ಮಾತನಾಡುತ್ತಲೇ ಪಠ್ಯ ಒಳಗೊಂಡ ಜಗತ್ತಿನ ಅನ್ಯ ವಿವರಗಳ ನೆನಪುಗಳಲ್ಲಿ ವಿಸ್ತರಿಸಿಕೊಳ್ಳುವ ವಿಚಾರ ವಿಮರ್ಶೆ, ಉಲ್ಲಾಸಗೊಂಡ ಮನಸ್ಸಿನ ಆರ್ದ್ರ ಭಾವದ ಔಚಿತ್ಯದಲ್ಲಿ ಅರಳಿದೆ. ’ಅಂತಿಗೊನೆ’ ಯ ಸಮಕಾಲೀನ ಮಹತ್ವ, ಮುಂಜಾವು ಅಗಮೆಮ್ಯಾನ್, ಜಗತ್ತಿನ ಪ್ರಥಮ ಯುದ್ಧವಿರೋಧಿ ನಾಟಕ, ಗಾಂಧಿ ವಿರುದ್ದ ಗಾಂಧಿ-ಒಂದು ವಾಗ್ವಾದ, ಸೂರ್ಯಶಿಕಾರಿಯ ಕನ್ನಡ ಅನುವಾದ, ಸಂಸ ಕವಿ ವಿಶಿಷ್ಟ ಪರಿಚಯ, ಗ್ರಂಥ ನೇರ ನಿರೂಪಣೆಯ ಜೀವನಕಥೆ, ಕಲೆಯೇ ಕಾಯಕ, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ;,ಜನಪ್ರಿಯ ವಿಜ್ಞಾನಕ್ಕೊಂದು ಮಾದರಿ ಗ್ರಂಥ, ಚರಿತ್ರಕಾರರಿಗೊಂದು ಆಕರ ಗ್ರಂಥ, ಒಂದು ಅನನ್ಯ ಜೀವನ ಚರಿತ್ರೆ, ಶಾಂತವೇರಿಯ ಅಶಾಂತ ಸಂತನ ಹೆಜ್ಜೆಗಳು, ಸಮಕಾಲೀನ ವಾಸ್ತವದ ಬೆಳಕಿನಲ್ಲಿ ಇಂಡಿಯಾದ ಕೈವ್, ಶಾಮಣ್ಣ, ನಿರೂಪಣೆಯಲ್ಲಿ ಹೊಸತನ ಪ್ರಾದೇಶಿಕ ಸಂಸ್ಕೃತಿಯ ಕಥನ; 'ಅಮ್ಮಜ್ಜಿಯ ಮ್ಯಾಗ್ಗುಂಡಿ' ಮುಂತಾದ ಲೇಖನಗಳು ಕೃತಿಯಲ್ಲಿವೆ.
©2024 Book Brahma Private Limited.