ಮಂಗಳೂರಿನ ಕುಂಜತ್ತಬೈಲಿನಲ್ಲಿರುವ ರಂಗ ಸ್ವರೂಪ ಸಂಸ್ಥೆ ತನ್ನ ದಶಕದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊರತಂದಿರುವ ದಶಮಾನೋತ್ಸವ ನೆನಪಿನ ಸಂಪುಟವಾಗಿದೆ ಈ ಕೃತಿ. ಹೃದಯದಲ್ಲಿ ಬರೆಯಲಾಗದವರು ಗೋಡೆಗಳಲ್ಲಿ ಬರೆಯುತ್ತಾರೆ ಎಂಬ ಮಾತಿದೆ. ಗೋಡೆಗಳಲ್ಲಿ ಎಲ್ಲರೂ ಬರೆಯುತ್ತಾರೆ. ಹೃದಯಗಳಲ್ಲಿ ಬರೆಯುವ ಕೆಲಸವನ್ನು ಕೆಲವರು ಮಾತ್ರ ಮಾಡುತ್ತಾರೆ. ಅಂಥವರು ನಿಜವಾದ ಗುರುಗಳು. ಗುರು ಎಂದರೆ ಪುಸ್ತಕದಲ್ಲಿ ಇರುವುದನ್ನು ಓದಿಸುವವನಲ್ಲ. ಶಿಷ್ಯನಿಗೆ ಒಳ ನೋಟಗಳನ್ನು ನೀಡಿ ಹಾದಿ ತೋರಿಸುವವನು. ಶಿಷ್ಯನ ಮಸ್ತಕವನ್ನು ಬೆಳೆಸಿ ಮುಂದಿನ ತಲೆಮಾರಿಗೆ ಬೆಳಕನ್ನು ತೋರಿಸುವವನು, ಹೀಗೆಂದು ಪೆರ್ಲ ಅಭಿಪ್ರಾಯ ಪಡುತ್ತಾರೆ. ಈ ಕೃತಿ ಒಂದು ಸಂಸ್ಥೆಯ ಸೃಜನಶೀಲ ಸಾಧನೆಗಳಿಗೆ ಮೀಸಲಾಗಿದೆ. ಶಿಕ್ಷಣವನ್ನು ವೈವಿಧ್ಯಪೂರ್ಣವಾಗಿ ಹೇಗೆ ಮಂಡಿಸಬಹುದು ಎನ್ನುವುದರ ಪ್ರಯೋಗಗಳು ಈ ಸಂಸ್ಥೆಯಿಂದ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಇಲ್ಲಿನ ಬರಹಗಳು ಸಂಸ್ಥೆಯ ವಿವರಗಳನ್ನು ತೆರೆದಿಡುತ್ತದೆ. ವಸಂತಕುಮಾರ್ ಪೆರ್ಲ, ಸುಬ್ರಹ್ಮಣ್ಯ ಕಾಸರಗೋಡು, ಪ್ರೇಮ್‌ನಾಥ್ ಮರ್ಣೆ, ರೆಹಮಾನ್ ಖಾನ್, ಸುಮಾಡ್ಕರ್, ಅಕ್ಷತಾ, ಸಂಧ್ಯಾಶ್ರೀ ಎಸ್, ಎನ್. ಶಿವಪ್ರಕಾಶ್, ಕುದ್ರೋಳಿ ಗಣೇಶ್, ಸಂಧ್ಯಾ ಪ್ರೇಮ್‌ನಾಥ್, ತಾರಾನಾಥ ಕೈರಂಗಳ, ಸುಜಯಾ ಕೆ. ಶೆಟ್ಟಿ, ದಿನೇಶ್ ಹೊಳ್ಳ ಮೊದಲಾದವರ ಬರಹಗಳನ್ನು ಈ ಸಂಪುಟವು ಒಳಗೊಂಡಿದೆ.
©2024 Book Brahma Private Limited.