ರಂಗಾಯಣ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 160

₹ 40.00




Year of Publication: 1995
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-4
Phone: 08362462718

Synopsys

ಕವಿ, ಅನುವಾದಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ರಂಗಭೂಮಿ-ನಾಟಕ ಕುರಿತ ಬರೆಹಗಳ ಸಂಕಲನ ’ರಂಗಾಯಣ’. ಈ ಸಂಗ್ರಹದಲ್ಲಿ 21 ಲೇಖನಗಳು ಹಾಗೂ ನಾಲ್ಕು ನಾಟಕಗಳಿಗೆ ಬರೆದ ಮುನ್ನುಡಿಗಳಿವೆ.

ರಾಷ್ಟ್ರೀಯ ರಂಗಭೂಮಿಗೆ ಕನ್ನಡದ ಕೊಡುಗೆ, ನಾಡಿನ ರಂಗಸಂಪದ, ಉತ್ತರ ಕರ್ನಾಟಕದ ರಂಗಭೂಮಿ : ಅಂದು-ಇಂದು, ಧಾರವಾಡ ಜಿಲ್ಲೆಯ ರಂಗಭೂಮಿ, ವಿಶ್ವರೂಪಿ ನಾಟಕ, ನಮ್ಮ ಹವ್ಯಾಸೀ ರಂಗಭೂಮಿ, ಪ್ರೇಕ್ಷಕನ ದೃಷ್ಟಿಯಲ್ಲಿ ಹವ್ಯಾಸೀ ರಂಗಭೂಮಿ, ಒಂದು ಆಶೆ: ಆಶಯ, ನಿರ್ದೇಶನ ಹಾಗೂ ಪ್ರಯೋಗ-ಪಲಾಯನ, ಹವ್ಯಾಸೀ ನಾಟಕ ತಂಡಗಳ ಆರ್ಥಿಕ ವ್ಯವಸ್ಥೆ, ಹವ್ಯಾಸೀ ರಂಗಭೂಮಿ : ಕೆಲವು ಪ್ರಶ್ನೆ-ಉತ್ತರಗಳು, ವೃತ್ತಿ ರಂಗಭೂಮಿ : ಅಂದು-ಇಂದು, ನಾಟಕ ಮತ್ತು ಪ್ರದರ್ಶಕ ಕಲೆಗಳು, ಕನ್ನಡ ನಾಟಕಗಳಲ್ಲಿ ಪೌರಾಣಿಕ ವಸ್ತು ವಿನ್ಯಾಸ : ತಂತ್ರ ಮತ್ತು ಪ್ರಯೋಗ, ನಾಟಕ : ಅನುವಾದ ಸಮಸ್ಯೆ, ಈ ದಶಕದ ನಾಟಕ, ಕನ್ನಡ ನಾಟಕಗಳು : ಅನುವಾದ ಮತ್ತು ರೂಪಾಂತರ, ರೇಡಿಯೋ ನಾಟಕಗಳು, ಬಸವಪ್ಪಶಾಸ್ತ್ರಿಗಳು, ವಿ.ಕೃ. ಗೋಕಾಕರ ನಾಟಕಗಳು, ರಾಕೇಶ್, ತೆಂಡುಲ್ಕರ್, ಸರ್‌ಕಾರ್, ಶ್ರೀರಂಗ ಎಂಬ ಲೇಖನಗಳಿವೆ.

ಹಾಗೆಯೇ ಪಾಂಡುರಂಗ ಪಾಟೀಲ ’ಜ್ವಾಲೆ ಮತ್ತು ಮಧ್ಯಂತರ’, ಹೂಲಿ ಶೇಖರ ಅವರ ’ಹಾವು ಹರಿದಾಡತಾವ’, ಸತ್ಯಾನಂದ ಪಾತ್ರೋಟರ ’ಮತ್ತೊಬ್ಬ ಏಕಲವ್ಯ’ ವಿರೂಪಾಕ್ಷ ಬಡಿಗೇರ ಅವರ ಯಶೋಧರ ನಾಟಕಗಳಿಗೆ ಬರೆದ ಮುನ್ನುಡಿಗಳು ಈ ಸಂಗ್ರಹದಲ್ಲಿವೆ. ಪಟ್ಟಣಶೆಟ್ಟರ ರಂಗಚಿಂತನೆ ಹಾಗೂ ಕನ್ನಡ ರಂಗಭೂಮಿಯ ಕುರಿತು ತಿಳಿಯುವವರಿಗೆ ಇದೊಂದು ಅಮೂಲ್ಯ ಗ್ರಂಥ ಎನ್ನಬಹುದು. 

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books