ಲೇಖಕ ಬಿ.ಎಸ್, ವಿದ್ಯಾರಣ್ಯ ಅವರು ಸಂಪಾದಿಸಿದ ಲೇಖನಗಳ ಕೃತಿ-ಆರ್.ನಾಗೇಶ ರಂಗವಿಹಂಗಮ. ರಂಗಭೂಮಿಯ ವಿನ್ಯಾಸ, ನಟ, ಬೆಳಕು ತಜ್ಞ ಹೀಗೆ ಹತ್ತು ಹಲವು ಆಯಾಮಗಳಲ್ಲಿ ಕೆಲಸ ಮಾಡಿರುವ ಆರ್. ನಾಗೇಶ ಅವರ ವ್ಯಕ್ತಿತ್ವ ಪರಿಚಯಿಸುವ ಕೃತಿ ಇದು. 20ನೇ ಶತಮಾನದ ಆರಂಭದಲ್ಲಿ ಯಾವ ರಂಗ ತರಬೇತಿಯೂ ಇಲ್ಲದೇ ರಂಗಭೂಮಿ ವಲಯದಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಆರ್. ನಾಗೇಶ್ (ಇವರ ಮೂಲ ಹೆಸರು-ರಾಮರಾಜೇ ಅರಸು ನಾಗೇಶ) ಅವರು ಹಲವಾರು ನಟರನ್ನು ಕನ್ನಡದ ರಂಗಭೂಮಿಗೆ ನೀಡಿದ ಕೀರ್ತಿ ಇವರದ್ದು. ಶ್ರೀನಿವಾಸ ಜಿ. ಕಪ್ಪಣ್ಣ, ಟಿ.ಎನ್. ಸೀತಾರಾಮು, ಕೆ.ಮರಳುಸಿದ್ದಪ್ಪ, ಪುರುಷೋತ್ತಮ ಬಿಳಿಮಲೆ, ಉಮಾಶ್ರೀ, ಮಂಡ್ಯ ರಮೇಶ್, ಎನ್.ಕೆ. ಮೋಹನರಾಮ ಅವರೆಲ್ಲರೂ ಆರ್. ನಾಗೇಶರನ್ನು ಬಲ್ಲವರು. ಈ ಎಲ್ಲ ಲೇಖಕರಿಂದ ಬರಹಗಳನ್ನು ಸಂಪಾದಿಸಿದ ಕೃತಿ ಇದು. ಈ ಕೃತಿಯು ಆರ್. ನಾಗೇಶ ಅವರ ರಂಗ ಹೆಜ್ಜೆಗಳನ್ನು ದಾಖಲಿಸುತ್ತವೆ.
©2025 Book Brahma Private Limited.