ಕರ್ನಾಟಕದ ನಾಟಕ ವೃತ್ತಿರಂಗದ ಪ್ರಮುಖ ನಾಟಕಗಳಲ್ಲಿ ಕೆಲವು ನಾಟಕಗಳ ಕುರಿತು ಈ ಕೃತಿಯು ಚಿತ್ರಣ ನೀಡಿದೆ. ಪ್ರಮುಖವಾಗಿ ಬಾಳಾಚಾರ್ಯ ಸಕ್ಕರಿ - ಶಾಂತಕವಿ ಅವರ ಉಷಾಹರಣ, ವಿದ್ವಾನ್ ವೆಂಕಟಾಚಾರ್ ಅವರ ಶ್ರೀಕೃಷ್ಣಲೀಲೆ, ಗರುಡ ಸದಾಶಿವರಾಯರ ಶ್ರೀರಾಮಪಾದುಕಾ ಪಟ್ಟಾಭಿಷೇಕ, ಹನುಮಂತರಾವ ಭೀಮರಾವ ಕಂದಗಲ್ಲ ಅವರ ರಕ್ತರಾತ್ರಿ, ಶ್ರೀಕಂಠಶಾಸ್ತ್ರಿ ಅಮರಾಯಧ ಹಿರೇಮಠ ನಲವಡಿ ಅವರ ಸಂಪುರ್ಣ ಹೇಮರೆಡ್ಡಿ ಮಲ್ಲಮ್ಮ ಅವರ ನಾಟಕಗಳು ಇಲ್ಲಿವೆ. ಡಾ. ರಾಮಕೃಷ್ಣ ಮರಾಠೆ ಮತ್ತು ಗುಡಿಹಳ್ಳಿ ನಾಗರಾಜ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.