ಹೆಸರಾಂತ ನಟ, ನಿರ್ದೇಶಕ ಸ್ತಾನಿಸ್ಲಾವ್‌ಸ್ಕಿಯ ಅಭಿನಯ ಶಾಸ್ತ್ರ ಕುರಿತಾದ ಪುಸ್ತಕ. ಜಗತ್ತಿನಲ್ಲಿಯೇ ಮೊದಲ ಬಾರಿಗೆ ಅಭಿನಯ ಎಂಬ ಅಮೂರ್ತ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವಿವೇಚಿಸಿದವ ಸ್ತಾನಿಸ್ಲಾವ್‌ಸ್ಕಿ. ‘ಅಭಿನಯ ಶಾಸ್ತ್ರ’ದ ಬಗ್ಗೆ ಗಮನ ಸೆಳೆದ ಸ್ತಾನಿಸ್ಲಾವ್‌ಸ್ಕಿಯ ಈ ಪುಸ್ತಕವನ್ನು ಜಗತ್ತಿನ ಎಲ್ಲ ಭಾಗಗಳ ಅಭಿನಯಕಾರರು ಮತ್ತು ರಂಗಕರ್ಮಿಗಳು ಶಾಸ್ತ್ರಗ್ರಂಥ ಎಂದು ಪರಿಗಣಿಸಿದ್ದಾರೆ. ಜಗತ್ತಿನ ಬಹುತೇಕ ರಂಗಶಿಕ್ಷಣಶಾಲೆಗಳು ಪುಸ್ತಕದಲ್ಲಿರುವ ‘ಪದ್ಧತಿ’ಯನ್ನೇ ಅಭಿನಯ ಶಿಕ್ಷಣದ ಅಡಿಗಲ್ಲಾಗಿ ಇಟ್ಟುಕೊಂಡಿವೆ. ರಂಗಕಲೆಯಲ್ಲಿ ಆಸಕ್ತಿ ಇರುವವರೆಲ್ಲರೂ ಓದಬೇಕಾದ ಪ್ರಮುಖ ಪುಸ್ತಕ. ಕೆ.ವಿ. ಸುಬ್ಬಣ್ಣ ಅವರು ಸೊಗಸಾಗಿ ಕನ್ನಡೀಕರಿಸಿದ್ದಾರೆ.
©2025 Book Brahma Private Limited.