ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆ ಕರಾವಳಿ ಕನ್ನಡ ರಂಗಭೂಮಿ

Author : ಎಚ್.ಎಂ. ಕುಮಾರಸ್ವಾಮಿ

Pages 150

₹ 60.00




Year of Publication: 2017
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆ ಮತ್ತು ಕರಾವಳಿ ರಂಗಭೂಮಿಯ ಕುರಿತು ಮಾಹಿತಿ ನೀಡುವ ಕೃತಿ ಇದು. ಸುಳ್ಯ ತಾಲ್ಲೂಕಿನ ರಂಗಭೂಮಿ: ಕರಾವಳಿ ರಂಗಭೂಮಿಗೆ ಅನನ್ಯ ಕೊಡುಗೆ-ನಮ್ಮ ಕಲಾವಿದರು, ಪುತ್ತೂರು ತಾಲ್ಲೂಕು ರಂಗಭೂಮಿ: ಹೊಸತು-ಹಳತು ಪರಂಪರೆಯ ಕೊಂಡಿ, ಬೆಳ್ತಂಗಡಿ ತಾಲ್ಲೂಕು ರಂಗಭೂಮಿ: ಕ್ರಿಯಾಶೀಲ ರಂಗ ಚಟುವಟಿಕೆ-ನಮ್ಮ ಕಲಾವಿದರು, ಬಂಟ್ವಾಳ ತಾಲ್ಲೂಕು ರಂಗಭೂಮಿ: ಸದ್ದಿಲ್ಲದೆ ಸಾಗಿರುವ ರಂಗ ಚಟುವಟಿಕೆ-ನಮ್ಮ ಕಲಾವಿದರು, ಮಂಗಳೂರು ತಾಲ್ಲೂಕು ಕನ್ನಡ ರಂಗಭೂಮಿ: ಸದ್ದಿಲ್ಲದೆ ಗದ್ದುಗೆ ಭದ್ರ-ನಮ್ಮ ಕಲಾವಿದರು, ಕಾಸರಗೋಡು ಕನ್ನಡ ರಂಗಭೂಮಿ: ಕಲೆಯ ಕುಲುಮೆಯಲ್ಲಿ ಹೊನ್ನಾಗಿ ಮಿಂಚಿದ ಕಾಸರಗೋಡು ರಂಗಭೂಮಿ-ನಮ್ಮ ಕಲಾವಿದರು, ನಾಟಕ ಅಕಾಡೆಮಿಯ ವಿವಿಧ ಪ್ರಶಸ್ತಿಗಳಿಂದ ಪುರಸ್ಕೃತರಾದ ಮಹನೀಯರು ಹೀಗೆ ದಕ್ಷಿಣ ಕನ್ನಡ, ಕಾಸರಗೋಡು, ಹಾಗೂ ಕರಾವಳಿ ಭಾಗದ ರಂಗಭೂಮಿ ಚಟುವಟಿಕೆಗಳ ಕುರಿತು ಈ ಕೃತಿಯು ಸಂಕ್ಷಿಪ್ತ ಮಾಹಿತಿ ನೀಡಿದೆ.

About the Author

ಎಚ್.ಎಂ. ಕುಮಾರಸ್ವಾಮಿ

ನಾಟಕಕಾರ, ಬರಹಗಾರ, ಪ್ರಾಧ್ಯಾಪಕರಾದ ಡಾ.ಎಚ್.ಎಂ. ಕುಮಾರಸ್ವಾಮಿ ಅವರ ಹುಟ್ಟೂರು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದರು. ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿರುವ ಇವರು ನಾಟಕ, ಲೇಖನ, ವಿಮರ್ಶೆ ಮುಂತಾದ ಸಾಹಿತ್ಯಿಕ ಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಗ್ರಾಮ ಸೇತುವೆ, ಖಾಲಿ ಬಾಟಲಿಗಳು (ಕಿರು ನಾಟಕ), ಬಯಲು (ನಾಟಕ), ಪಿರಮಿಡ್‌ (ಹಿಂದಿ ಕತೆಗಳ ಅನುವಾದ), ಬಂಕಾಪುರದ ಬಯಲಾಟ (ಅನುವಾದಿತ ಕೃತಿ), ವಿಚಿತ್ರೇಶ್ವರನ ಜಾತ್ರೆ, ರಾಷ್ಟ್ರ ಕವಿ ಗೋವಿಂದ ...

READ MORE

Related Books