‘ದಡವ ನೆಕ್ಕಿದ ಹೊಳೆ’ ಶ್ರೀ ಪಾದ ಭಟ್ ಅವರ ರಂಗ ಪಯಣದ ಕಥನವಾಗಿದೆ. ದಾರಿ ನೂರಾರಿವೆ ಬೆಳಕಿನ ಅರಮನೆಗೆ’ ಎನ್ನುವಂತೆ ಶ್ರೀಪಾದ ಭಟ್ ಅವರು ಬೆಳಕಿನ ದಿಕ್ಕಿನತ್ತ ಸಾಗಲು, ತಮ್ಮೊಂದಿಗೆ ಇತರರನ್ನೂ ಆ ಬೆಳಕಿನತ್ತ ಕರೆದೊಯ್ಯಲು ಆಯ್ದುಕೊಂಡದ್ದು ರಂಗಭೂಮಿಯನ್ನು. ಶ್ರೀಪಾದ ಭಟ್ಟರ ಆಲೋಚನೆಗೆ ರೆಕ್ಕೆ ಸಿಕ್ಕುವುದೇ ಜನ ಸಮೂಹದಲ್ಲಿ. ಹಾಗಾಗಿ ರಂಗಭೂಮಿಯ ಮೂಲಕ ಸಮಾಜಕ್ಕೆ ಕನ್ನಡಿ ಹಿಡಿಯುತ್ತಾರೆ. ಇವರು ರಂಗಭೂಮಿಯ ಮೂಲಕ ನಮ್ಮೊಳಗೆ ಒಂದು ತುಮುಲವನ್ನು ಹುಟ್ಟುಹಾಕುತ್ತಾರೆ. ಪ್ರಶ್ನೆಗಳನ್ನು ಕೂರಿಸುತ್ತಾರೆ. ಅದಕ್ಕೆ ಉತ್ತರ ಪಡೆಯುವ ದಿಕ್ಕಿನಲ್ಲಿ ನಮ್ಮನ್ನು ನಿರಂತರ ಪಯಣಿಗರನ್ನಾಗಿಸುತ್ತಾರೆ. ಶ್ರೀಪಾದ್ ಭಟ್ ಅವರ ಇಂತಹ ರಂಗ ಪಯಣದ ಕಥೆಯೇ- ‘ದಡವ ನೆಕ್ಕಿದ ಹೊಳೆ’.
©2024 Book Brahma Private Limited.