ಬೆಂಗಳೂರು ನಗರ ಜಿಲ್ಲೆಯ ರಂಗಮಾಹಿತಿಯನ್ನು ಈ ಪುಸ್ತಕದಲ್ಲಿ ದಾಖಲಿಸುವ ಪ್ರಯತ್ನವಿದು. ಕನ್ನಡ ಹವ್ಯಾಸಿ ರಂಗಭೂಮಿಗೆ ಒಂದು ಮಾರ್ಗದರ್ಶಿ ಪಾತ್ರವನ್ನು ರೂಪಿಸಿದ್ದು ಬೆಂಗಳೂರಿನ ರಂಗಚಟುವಟಿಕೆಗಳು. 60-70 ರ ದಶಕದಲ್ಲಿ ಆರಂಭಗೊಂಡ ಈ ರಂಗಚಳವಳಿ ಇಂದಿಗೂ ಬೃಹತ್ತಾಗಿ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಆಗಾಗ್ಗೆ ಮೊಕ್ಕಾಂ ಮಾಡುತ್ತಿದ್ದ ಗುಬ್ಬಿ ತಂಡ, ಕೆ. ಹಿರಣ್ಣಯ್ಯ ಮಿತ್ರ ಮಂಡಳಿ ಮುಂತಾದ ವೃತ್ತಿ ಕಂಪನಿಗಳ ಜೊತೆಗೆ ಅಮೆಚೂರ್ ಡ್ರಾಮಾಟಿಕ್ ಅಸೋಸಿಯೇಶನ್ ಸೇರಿದಂತೆ ಅನೇಕ ವಿಲಾಸಿ ರಂಗತಂಡಗಳು ಹವ್ಯಾಸಿ ತಂಡಗಳಾಗಿ ರೂಪಾಂತರಗೊಂಡು, ರಂಗಚಟುವಟಿಕೆಗಳನ್ನು ಹೆಮ್ಮರವಾಗಿ ಬೆಳೆಸಲು ಸಹಕರಿಸಿವೆ.
ಮುಖ್ಯವಾಗಿ ಈ ಕೃತಿಯಲ್ಲಿ ಹೊಸತನದ ಹುಡುಕಾಟದಲ್ಲಿ, ಬೆಂಗಳೂರಿನಲ್ಲಿ ಗುಬ್ಬಿ ಕಂಪನಿಯ ನೆಲೆ, ಬೆಂಗಳೂರು ರಂಗಭೂಮಿ-ರಾ. ಜೆ. ಶ್ರೀನಿವಾಸಮೂರ್ತಿ, ಪೌರಾಣಿಕ ನಾಟಕಗಳ ರಂಗಭೂಮಿ-ಗುಡಿಹಳ್ಳಿ ನಾಗರಾಜ, ಬೆಂಗಳೂರಿನಲ್ಲಿ ಯಕ್ಷಗಾನ-ಶ್ರೀನಿವಾಸ ಸಾಸ್ತಾನ, ಬೆಂಗಳೂರಿನ ಕಾರ್ಮಿಕ ರಂಗಭೂಮಿ, ಬೆಂಗಳೂರಿನಲ್ಲಿ ಆಂಗ್ಲ ರಂಗಭೂಮಿ-ಪ್ರಕಾಶ ಬೆಳವಾಡಿ, ಬೀದಿನಾಟಕ ಚಳವಳಿ-ಕೆ.ವಿ. ನಾಗರಾಜಮೂರ್ತಿ, ಬೆಂಗಳೂರಿನ ರಂಗತಂಡಗಳು-ಶಶಿಧರ್ ಭಾರಿಘಾಟ್, ಬೆಂಗಳೂರಿನ ರಂಗಮಂದಿರಗಳು-ಕೆ.ವಿ. ನಾಗರಾಜಮೂರ್ತಿ, ತಂಡಗಳ ಪೂರಕ ಮಾಹಿತಿ, ಕರ್ನಾಟಕದಲ್ಲಿ ‘ಭಾರತೀಯ ಜನಕಲಾ ಸಮಿತಿ; (ಇಪ್ಪಾ): ಶಶಿಕಾಂತ ಯಡಹಳ್ಳಿ, ಮಹಿಳೆಯರ ಏಕವ್ಯಕ್ತಿ ಪ್ರದರ್ಶನ: ಮೀನಾ ಮೈಸೂರು, ರಂಗಸಂಗೀತ: ಶಶಿಧರ ಭಾರಿಘಾಟ್, ಇಲ್ಲಿ ಯಾರು ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ, ಮುನಿರಂಗಪ್ಪ ಎಂಬ ಬಹುರೂಪಿ, ರಂಗಭೂಮಿ, ಪತ್ರಿಕೆಗಳು, ವಿಮರ್ಶೆ ಮುಂತಾದ ವಿಷಯಗಳ ಕುರಿತು ಈ ಕೃತಿಯು ಗಮನಹರಿಸಿದೆ.
©2025 Book Brahma Private Limited.