ನಾಗರಿಕಪೂರ್ವ ಯುಗದಿಂದ ಆರಂಭಿಸಿ, ಸಮಕಾಲೀನ ರಂಗಭೂಮಿಯವರೆಗೆ; ಅಮೆರಿಕಾದಿಂದ ಆರಂಭಿಸಿ ಚೀನಾ-ಜಪಾನುಗಳವರೆಗೆ; ಪ್ರಪಂಚದ ವಿವಿಧ ಕಾಲ-ದೇಶಗಳ ರಂಗಸಾಧನೆಗಳನ್ನು ಪರಿಚಯಿಸುವ ಪ್ರಯತ್ನವಾಗಿ ’ರಂಗಪ್ರಪಂಚ’ ಕೃತಿ ಹೊರಬಂದಿದೆ.
ಆಸಕ್ತ ಓದುಗ ಮತ್ತು ಅಭ್ಯಾಸಾಕಾಂಕ್ಷಿ ವಿದ್ಯಾರ್ಥಿ ಈ ಇಬ್ಬರನ್ನೂ ಗಮನದಲ್ಲಿಟ್ಟುಕೊಂಡು ರಚಿತವಾದ ಈ ಪುಸಕದಲ್ಲಿ ಪ್ರತಿಯೊಂದು ರಂಗಭೂಮಿಯ ಉದ್ದೇಶ, ಸಂದರ್ಭ, ರಂಗಮಂದಿರ, ರಂಗಸಜ್ಜಿಕೆ, ಸಂಘಟನೆ, ಅಭಿನಯ, ರಂಗತಂತ್ರಗಳು, ಮೀಮಾಂಸೆ ಮತ್ತು ನಾಟಕಸಾಹಿತ್ಯ ಹೀಗೆ ಈ ಎಲ್ಲ ವಿಷಯಗಳನ್ನು ಪರಿಚಯಿಸುವ ಜತೆಗೆ ಆಯಾ ರಂಗಭೂಮಿಯನ್ನು ಅದರ ಸಾಮಾಜಿಕ-ಸಾಂಸ್ಕ ತಿಕ ಹಿನ್ನೆಲೆಯಲ್ಲಿ ಕೂರಿಸುವ ಪ್ರಯತ್ನವನ್ನೂ ಮಾಡಲಾಗಿದೆ.
ರಂಗಪ್ರಪಂಚ ತನ್ನ ಗುರಿ ಸಾಧಿಸಿದೆ. ಕನ್ನಡದ ವಿಚಾರವಂತ ಸಾಮಾನ್ಯ ಓದುಗನಿಗೋ ವಿದ್ಯಾರ್ಥಿಗೋ ಎಷ್ಟು ಬೇಕೋ ಅಷ್ಟನ್ನೇ ಇಲ್ಲಿ ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ರಂಗಕರ್ಮಿಗಳಿಗಂತೂ ಇದೊಂದು ರನ್ನಭಂಡಾರವೇ ಆಗಿದೆ. ಇದೀಗ ಹಳ್ಳಿಪಳ್ಳಿಗಳಲ್ಲಿಯೂ ಆ ಬೀದರಿನಿಂದ ಈ ಸುಳ್ಯದವರೆಗೂ ರಂಗೋತ್ಸಾಹಿಗಳು ತುಂಬಿ ತುಳುಕುತ್ತಿರುವಾಗ ಅವರಿಗೆ ಸ್ವಸ್ಥಾನ ಪರಿಜ್ಞಾನ ಮೂಡಿಸಲು ಈ ಗ್ರಂಥ ಉಪಕಾರ ಮಾಡೀತು.ಕು.ಶಿ. ಹರಿದಾಸಭಟ್ಟ (ಉದಯವಾಣಿ - ೨೬ ನವೆಂಬರ್ ೧೯೯೪) ಈ ಪುಸ್ತಕದಲ್ಲಿ ನಿರೂಪಿತವಾದ ಇತಿಹಾಸ ಉಲ್ಲಾಸದಾಯಕವಾಗಿದೆ. ಅದರ ವ್ಯವಸ್ಥೆಯಲ್ಲಿಯೇ ಒಂದು ಸೊಗಸಿದೆ; ವಿನ್ಯಾಸದಲ್ಲಿ ವೈವಿಧ್ಯವಿದೆ. ಕೆಲವು ಇತಿಹಾಸ ನಿರೂಪಣೆಗಳಲ್ಲಿ ಕಣ್ಣುಪಟ್ಟಿ ಕಟ್ಟಿಕೊಂಡ ಏಕಮುಖತೆ ಇರುತ್ತದೆ. ಅಕ್ಷರರ ಬರವಣಿಗೆ ಆ ತೆರನಾದುದಲ್ಲ. ಇತಿಹಾಸವನ್ನು ಸಮಗ್ರ ದೃಷ್ಟಿಯಿಂದ ಪರಿಶೀಲಿಸುವ ಅವರ ಪ್ರಯತ್ನ ಆಕರ್ಷಕವಾಗಿದೆ.
©2024 Book Brahma Private Limited.