ಕನ್ನಡದ ಹೆಸರಾಂತ ನಾಟಕಗಳ ರಂಗ ಗೀತೆಗಳ ಸಂಗ್ರಹವಿದು. ಕವಿ ಸಂಗಮೇಶ ತಮ್ಮನಗೌಡ್ರ ಅವರು ಸಂಪಾದಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಿಕ್ಷಣದಲ್ಲಿ ರಂಗ ಕಲೆ ಕುರಿತು ತಿಳಿಸುವ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುವ ಅನುಭವದ ಹಿನ್ನೆಲೆಯಲ್ಲಿ ರಂಗ ಗೀತೆಗಳ ಕುರಿತು ಶಿಕ್ಷಕರಲ್ಲಿ ಹಾಗೂ ರಂಗ ಕಲಾಸಕ್ತರಲ್ಲಿ ಆಸಕ್ತಿ ಮೂಡಿಸಲು ಇಂತಹ ಕೃತಿ ರಚನೆಯ ಉದ್ದೇಶ ಹುಟ್ಟಿಕೊಂಡಿದ್ದೇ ಈ ಕೃತಿ ರಚನೆಗೆ ಕಾರಣ ಎಂದು ಲೇಖಕರು ಹೇಳಿದ್ದಾರೆ.
ಚಂದ್ರಶೇಖರ ಕಂಬಾರರ ಸಂಗ್ಯಾ-ಬಾಳ್ಯಾ, ಗಿರೀಶ್ ಕಾರ್ನಾಡರ ಹಯವದನ, ಶ್ರೀರಂಗರ ಹರಿಜನ್ವಾರ, ಕೀರ್ತಿನಾಥ ಕುರ್ತಕೋಟಿ ಅವರ ಸ್ವಪ್ನದರ್ಶಿ, ಬಿ.ಎಂ. ಶ್ರೀ ಅವರ ಅಶ್ವತ್ಥಾಮನ್, ಬಿ.ವಿ.ಕಾರಂತರ ಹೆಡ್ಡಾಯಣ, ವಿ. ವೆಂಕಟರಾಮಯ್ಯ ಅವರ ಪತಿತ ಪಾವನ ಹೀಗೆ ಒಟ್ಟು 47 ರಂಗ ಗೀತೆಗಳನ್ನು ಸಂಪಾದಿಸಲಾಗಿದೆ.
©2024 Book Brahma Private Limited.