ಸಂಕೀರ್ಣ ಬಳ್ಳಾರಿ ಎಂಬ ಪುಸ್ತಕವು ಮೃತ್ಯುಂಜಯ ರುಮಾಲೆ ಅವರ ಲೇಖನಗಳ ಸಂಗ್ರಹ. ಇದು ಬಳ್ಳಾರಿಯ ವಿವಿಧ ಹಿರಿಮೆಗಳನ್ನು ಕಾಣಿಸುವ ಬರಹಗಳನ್ನು ಒಲಗೊಮಡಿದೆ. ಬಳ್ಳಾರಿಯ ಚರಿತ್ರೆ, ರಂಗಭೂಮಿ, ವ್ಯಕ್ತಿಗಳು, ಸಂಸ್ಕೃತಿಯನ್ನು ಕುರಿತು ತಿಳಿಸುತ್ತದೆ. ಹಿರಿಯ ವಿದ್ವಾಂಸರಾದ ಡಾ. ಮೃತ್ಯುಂಜಯ ರುಮಾಲೆ ಅವರು ಶ್ರೀಮಠದ ಮೇಲಿನ ಪ್ರೀತಿಗಾಗಿ ಅಖಂಡ ಬಳ್ಳಾರಿ ಜಿಲ್ಲೆಯ ಕಲೆ, ರಂಗಭೂಮಿ, ಸಾಂಸ್ಕೃತಿಕವಾದ ವಿಚಾರವನ್ನು ಒಳಗೊಂಡಿರುವ ಅಪರೂಪದ ಲೇಖನಗಳ ಕೃತಿಯನ್ನು ಪ್ರಕಟಿಸಲು ಅವರು ಒಪ್ಪಿಗೆಯನ್ನು ನೀಡಿ ಅವಕಾಶ ನೀಡಿದ್ದಕ್ಕಾಗಿ ಸಂತೋಷವಾಗುತ್ತದೆ. ಶ್ರೀಮಠದ ಶ್ರೀ ಶರಣಬಸವೇಶ್ವರ ಗ್ರಂಥಮಾಲೆ ಯೋಜನೆಯ ಮೊದಲ ಕೃತಿಯಾಗಿ ಡಾ. ಮೃತ್ಯುಂಜಯ ರುಮಾಲೆ ಅವರ `ಸಂಕೀರ್ಣ ಬಳ್ಳಾರಿ' ಕೃತಿಯನ್ನು ಆಯ್ಕೆ ಮಾಡಿ ಪ್ರಕಟಿಸಲಾಗಿದೆ ಎಂದು ಐಮಡಿ ಶರಣಾರ್ಯರು ಈ ಕೃತಿಯ ಬಗ್ಗೆ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.