ರಾಮರಾಜ್ಯ ಪೂರ್ವರಂಗ

Author : ದೇರಾಜೆ ಸೀತಾರಾಮಯ್ಯ

Pages 108

₹ 120.00




Year of Publication: 2009
Published by: ಜ್ಞಾನಗಂಗಾ ಬುಕ್ ಹೌಸ್
Address: ದರ್ಬೆ, ಪುತ್ತೂರು - 574202

Synopsys

`ರಾಮರಾಜ್ಯ ಪೂರ್ವರಂಗ’ ದೇರಾಜೆ ಸೀತಾರಾಮಯ್ಯ ಅವರ ಸಂಕಲನವಾಗಿದೆ. ಈ ಕೃತಿಯು ರಾಮಾಯಣ ಅಯೋದ್ಯಾ ಕಾಂಡದ ಕುರಿತು ಹೊಸದೃಷ್ಟಿಯನ್ನು ಹರಿಸುತ್ತದೆ. ರಾಮಾಯಣದ ಹಲವಾರು ಕಥಾನಕಗಳನ್ನು ಇಲ್ಲಿ ವಿವರಿಸಲಾಗಿದೆ. ಒಟ್ಟಾರೆಯಾಗಿ ಈ ಕೃತಿಯು ಇತಿಹಾಸವನ್ನು ಕಟ್ಟಿಕೊಡುವ ಕೆಲಸವನ್ನು ಮಾಡಿದೆ.

About the Author

ದೇರಾಜೆ ಸೀತಾರಾಮಯ್ಯ
(17 November 1914 - 05 October 1984)

ಹಿರಿಯ ಚಿಂತಕ-ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದ ದೇರಾಜೆ ಸೀತಾರಾಮಯ್ಯ ಅವರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದವರು. ಜಮೀನುದಾರರು. ತಂದೆ ಮಂಗಲ್ಪಾಡಿ ಕೃಷ್ಣಯ್ಯ, ತಾಯಿ ಸುಬ್ಬಮ್ಮ. ಯಕ್ತಗಾನ ಕಲಾವಿದರ ಮನೆತನ. ಪ್ರಾಥಮಿಕ ಶಾಲೆಯ ಗುರು ಕೊಟ್ಟೆಕಾಯಿ ನಾರಾಯಣ ರಾಯರ ಕುಮಾರವ್ಯಾಸ ಕುರಿತ ಪಾಠದಿಂದ ಅಭಿನಯ, ಸಾಹಿತ್ಯಾಸಕ್ತಿ ಮೂಡಿತು. ಯಕ್ಷಗಾನ, ತಾಳಮದ್ದಳೆ, ನಾಟಕ, ರಂಗಭೂಮಿಯ ಬಗ್ಗೆ ಸಂಶೋಧನೆ - ವಿಮರ್ಶೆಗಳು ಹೀಗೆ ವೈವಿಧ್ಯಮಯ ಸಾಹಿತ್ಯ ರಚಿಸಿದ್ದು ಇವರ ವೈಶಿಷ್ಟ್ಯ. ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷರಾಗಿದ್ದರು. ಪುತ್ತೂರು ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷರು, ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಕೃತಿಗಳು: ಭೀಷ್ಮಾರ್ಜುನ ...

READ MORE

Related Books