ಕನ್ನಡ ನುಡಿಯ ಹಿನ್ನಡವಳಿ(ಚರಿತ್ರೆ)ಯನ್ನು ಈ ಕಿರುಕಡತದಲ್ಲಿ ಅಡಕವಾಗಿ ತಿಳಿಸಿಕೊಡಲಾಗಿದೆ. ಇದಕ್ಕಾಗಿ ಬರಿಯ ಕನ್ನಡದ ಶಾಸನಗಳ ಮತ್ತು ಕಾವ್ಯಗಳ ನಡುವಿನ ಬೇರ್ಮೆಗಳನ್ನಶ್ಟೇ ಬಳಸುವ ಬದಲು, ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ದ್ರಾವಿಡ ನುಡಿಗಳಿಗೂ ಕನ್ನಡಕ್ಕೂ ನಡುವಿರುವ ಬೇರ‍್ಮೆಗಳನ್ನೂ ಬಳಸಿಕೊಳ್ಳಲಾಗಿದೆ. ಈ ಎಲ್ಲಾ ದ್ರಾವಿಡ ನುಡಿಗಳಿಗೂ ಮೊದಲಿಗಿದ್ದ ಮುನ್ದ್ರಾವಿಡವೆಂಬ ಕಲ್ಪಿತ ನುಡಿಯಿಂದ ಕನ್ನಡ ಹೇಗೆ ಬೆಳೆದುಬಂದಿದೆ ಎಂಬುದನ್ನು, ಮತ್ತು ಹಾಗೆ ಬೆಳೆದುಬಂದಿರುವ ಮುನ್ಗನ್ನಡವೆಂಬ ಇನ್ನೊಂದು ಕಲ್ಪಿತ ನುಡಿಯಿಂದ ಇವತ್ತು ಬಳಕೆಯಲ್ಲಿರುವ ಹಲವಾರು ಕನ್ನಡದ ಒಳನುಡಿಗಳು ಹೇಗೆ ಬೆಳೆದುಬಂದಿವೆ ಎಂಬುದನ್ನು ಈ ಹಿನ್ನಡವಳಿ ಅಡಕವಾಗಿ ತಿಳಿಸುತ್ತದೆ.
©2024 Book Brahma Private Limited.