ಕೋಲಾರ ಕನ್ನಡದ ರಚನೆ, ರೀತಿ-ರಿವಾಜುಗಳುಎಂಬ ಉಪಶೀರ್ಷಿಕೆಯಡಿ ಲೇಖಕ ಸ. ರಘುನಾಥ ಅವರ ಕೃತಿ-ಮೊರಸುನಾಡು ಕನ್ನಡ. ಆಂಧ್ರಪ್ರದೇಶ-ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಮಾತ್ರ ವಿಚ್ಛಿನ್ನ ರೂಪದಲ್ಲಿರುವ ಮೊರಸು ಭಾಷೆ ಕರ್ನಾಟಕದಲ್ಲಿ ವಿಶೇಷವಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಣಬಹುದು. ಹತ್ತು ಹಲವು ಕನ್ನಡಗಳ ಪೈಕಿ ಮೊರಸು ಕನ್ನಡವೂ ಒಂದು. ಈ ಭಾಷೆಗೂ ವ್ಯಾಕರಣವಿದೆ. ಒಂದು ಪದಕಟ್ಟು ಇದೆ. ಭಾಷೆಯು ತೆಲುಗಿಗೆ ತೀರಾ ಹತ್ತಿರವಿದೆ. ಇಂತಹ ಮೊರಸು ಭಾಷೆಯ ಸ್ವರೂಪ, ವ್ಯಾಕರಣ ಹೀಗೆ ಹಲವು ಮಗ್ಗಲುಗಳಿಂದ ವಿಶ್ಲೇಷಿಸಿದ ಕೃತಿ ಇದು.
©2024 Book Brahma Private Limited.