‘ಕನ್ನಡ ಭಾಷಾ ಸ್ವರೂಪ’ ಹಿರಿಯ ಲೇಖಕ ಡಾ. ಸಂಗಮೇಶ ಸವದತ್ತಿಮಠ ಅವರು ರಚಿಸಿರುವ ಕನ್ನಡ ಭಾಷೆಯ ಸಮಗ್ರ ಕೈಪಿಡಿ. ಇದು ಕನ್ನಡ ಭಾಷಾಧ್ಯಯನ ಕ್ಷೇತ್ರದ ಒಂದು ವಿಶಿಷ್ಟ ಕೃತಿ. ಪಾರಂಪರಿಕ ಮತ್ತು ಆಧಾನಿಕ ಎರಡೂ ದೃಷ್ಟಿಗಳನ್ನು ಇಟ್ಟುಕೊಂಡು, ಕನ್ನಡ ಭಾಷೆಯ ಚರಿತ್ರೆಯ ಹಿನ್ನೆಲೆಯಲ್ಲಿ ಸಂಕ್ಷಿಪ್ತ ಮತ್ತು ಸಮಗ್ರವಾಗಿ ಭಾಷಾ ವಿವೇಚನೆಯನ್ನು ಇಲ್ಲಿ ಮಾಡಲಾಗಿದೆ. ಇದರಿಂದ ಕನ್ನಡ ಭಾಷೆಯ ಸ್ವರೂಪವನ್ನು ತಿಳಿದುಕೊಳ್ಳಲು ಪಾರಂಪರಿಕ ವೈಯಾಕರಣದ ವಿಚಾರಗಳ ಗೊಂದಲಗಳು ಬಹುಮಟ್ಟಿಗೆ ನಿವಾರಣೆಯಾಗಿ ಕನ್ನಡದ ಪ್ರಾಚೀನ ಆಧುನಿಕ ಕಾಲ ಘಟ್ಟಗಳ ಚಿತ್ರಣವನ್ನು ಸ್ಪಷ್ಟಪಡಿಸಲು ಇಲ್ಲಿ ಸಾಧ್ಯವಾಗಿದೆ.
ಪಾರಂಪರಿಕ ವ್ಯಾಕರಣದಲ್ಲಿನ ದೋಷ ಅಥವಾ ಸಂದೇಹಗಳನ್ನು ಆಧುನಿಕ ಭಾಷಾ ವಿಜ್ಞಾನದ ವಿಚಾರಗಳ ಹಿನ್ನೆಲೆಯಲ್ಲಿ ವಿವೇಚನೆಗೆ ಒಳಪಡಿಸಿರುವುದರಿಂದ ವ್ಯಾಕರಣಾಂಶಗಳು ಹೆಚ್ಚು ಸ್ಪಷ್ಟವಾಗಿರುವುದು ಇಲ್ಲಿಯ ಆಧುನಿಕರ ವಿಚಾರಗಳ ದೃಷ್ಟಿಯಿಂದ ಪರಿಶೀಲಿಸಿದ್ದು, ಕನ್ನಡದ ಒಂದು ಅಪರೂಪದ ಕೃತಿಯಾಗಿದೆ. ಭಾಷಾವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ ಅವರ ಭಾಷಾವಿಜ್ಞಾನ ಕ್ಷೇತ್ರದ ಕೃತಿಶ್ರೇಣಿಯಲ್ಲಿ ಇದೊಂದು ಗಮನಾರ್ಹ ಕೃತಿ.
©2024 Book Brahma Private Limited.