ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದ್ದೇ ಆದ ಪದಗಳನ್ನು ಕೊಡುವ ಒಂದು ಪ್ರಯತ್ನವನ್ನು ಈ ಪದನೆರಕೆಯಲ್ಲಿ ಮಾಡಲಾಗಿದೆ. ಅಂತಹ ಪದಗಳು ಕನ್ನಡದಲ್ಲಿ ಇಲ್ಲದಿರುವಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ, ಇಲ್ಲವೇ ಪದಗಳನ್ನು ಜೋಡಿಸಿ, ಹೊಸದಾಗಿ ಪದಗಳನ್ನು ಉಂಟು ಮಾಡುವ ಕೆಲಸವನ್ನೂ ಇಲ್ಲಿ ನಡೆಸಲಾಗಿದೆ. ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡುವವರು ಹೆಚ್ಚಾಗಿ ಸಂಸ್ಕೃತದ ಪದ ಮತ್ತು ಒಟ್ಟುಗಳನ್ನು ಬಳಸುತ್ತಾರೆ.
©2025 Book Brahma Private Limited.