ಲೇಖಕ ಕೆ. ಕುಶಾಲಪ್ಪ ಗೌಡ ಅವರು ಬರೆದ ಗೌಡ ಕನ್ನಡ ವ್ಯಾಕರಣ ಕೃತಿ ʼಅರೆಬಾಸೆʼ. ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಅರೆಭಾಷೆಯು ಒಂದು ಉಪಭಾಷೆಯಾಗಿದೆ. ಹಾಗಾಗಿ ಇದರ ಬರವಣಿಗೆಗಳು ಕನ್ನಡ ಪದಗಳಲ್ಲಿವೆ. ಈ ಭಾಷೆಗೆ 500 ವರ್ಷಗಳ ಇತಿಹಾಸ ಇದೆ ಅಂತ ಹೇಳಲಾಗುತ್ತಿದ್ದು, ಕೊಡಗು, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಒಂದು ಭಾಷೆಯಾಗಿದೆ. ಗೌಡ ಸಮುದಾಯದವರು ಮಾತನಾಡುವ ಈ ಭಾಷೆಯ ಹುಟ್ಟು, ಬೆಳವಣಿಗೆ ಹಾಗೂ ಜನರ ಆಚಾರ- ವಿಚಾರಗಳ ಕುರಿತು ಅರೆಬಾಸೆ ಪುಸ್ತಕವು ಹೇಳುತ್ತದೆ.
©2024 Book Brahma Private Limited.