ಬ್ಯಾರಿ ಭಾಷೆ-ದ್ರಾವಿಡ ಭಾಷೆಯೇ?

Author : ಬಿ. ಎಂ. ಇಚ್ಚಂಗೋಡು

Pages 84

₹ 100.00




Published by: ಮೀಡಿಯಾ ಟೈಮ್ಸ್ ಪಬ್ಲಿಕೇಶನ್ಸ್
Address: ಮಂಗಳೂರು

Synopsys

ತನ್ನ ಅಸ್ಮಿತೆಗಾಗಿ ಒದ್ದಾಡುತ್ತಲೇ ಇರುವ ಕರಾವಳಿ ಭಾಗದ ಜನರು ಆಡುತ್ತಿರುವ ಭಾಷೆ ಬ್ಯಾರಿ ಭಾಷೆ. ಬ್ಯಾರಿ ಸಮುದಾಯದ ಸಾಮಾಜಿಕ ಏಳು ಬೀಳುಗಳ ಜೊತೆಗೆ ಭಾಷೆ ಹೊಂದಿರುವ ಸಂಬಂಧ ಅತ್ಯಂತ ಕುತೂಹಲಕರವಾದುದು. ಒಂದು ಹಂತದಲ್ಲಿ ಕೆಲವು ಭಾಗದಲ್ಲಿ ನಕ್ಕ್-ನಿಕ್ಕ್ (ನನಗೆ-ನಿನಗೆ) ಎಂದೇ ಗುರುತಿಸಲ್ಪಡುತ್ತಿದ್ದ ಈ ಭಾಷೆ ಕೆಲವೆಡೆ ಮಲಯಾಳವೆಂದು, ಮಾಪಿಳ್ಳೆ ಭಾಷೆಯೆಂದು ಗುರುತಿಸಲ್ಪಡುತ್ತಾ ಸ್ವತಃ ಬ್ಯಾರಿ ಮುಸ್ಲಿಮರೇ ಆ ಭಾಷೆಯ ಕುರಿತಂತೆ ಕೀಳರಿಮೆ ಪಡುತ್ತಿದ್ದ ಕಾಲವೊಂದಿತ್ತು. ಒಮ್ಮೆ ಉಚ್ಛಾಯ ಘಟ್ಟದಲ್ಲಿದ್ದ ಸಮುದಾಯ ನಿಧಾನಕ್ಕೆ ಸಾಮಾಜಿಕವಾಗಿ ಪತನ ಕಾಣುತ್ತಾ 'ಬ್ಯಾರಿ' ಎಂದು ಮುಸ್ಲಿಮರೊಳಗೇ ಗುರುತಿಸಲು ಅಂಜುತ್ತಿದ್ದ ದಿನಗಳಲ್ಲಿ, ಬ್ಯಾರಿ ಆಂದೋಲನವೊಂದು ಆರಂಭವಾಗಿ, ಸಾಹಿತ್ಯ, ಸಂಸ್ಕೃತಿಯ ಕುರಿತಂತೆ ಈ ಸಮುದಾಯದೊಳಗೆ ಜಾಗೃತಿ ಆರಂಭವಾಯಿತು. ಮುಂದೆ ಬ್ಯಾರಿ ಅಕಾಡಮಿ ಸ್ಥಾಪನೆಯಾಗಿದ್ದು ಮಾತ್ರವಲ್ಲ, ಬ್ಯಾರಿ ಭಾಷೆಯಲ್ಲಿ ಕತೆ, ಕವಿತೆ, ಲೇಖನಗಳು, ಕಾದಂಬರಿಗಳು ಹೊರಬಂದವು. ಅಪಾರ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. 'ಬ್ಯಾರಿ' ಭಾಷೆಯಲ್ಲೇ ಸಿನೆಮಾ ಒಂದು ಹೊರ ಬಂತಲ್ಲದೆ ಅದಕ್ಕೆ ಸ್ವರ್ಣಕಮಲ ಪ್ರಶಸ್ತಿಯೂ ದೊರಕಿತು. ಆದರೂ ಭಾಷೆಯ ಕುರಿತಂತೆ, ಅದರ ಲಿಪಿಯ ಕುರಿತಂತೆ ವಿದ್ವಾಂಸರ ನಡುವೆ ಗೊಂದಲಗಳು ಇದ್ದೇ ಇವೆ. ಈ ಹಿನ್ನೆಲೆಯಲ್ಲಿ ಹಿರಿಯ ಬ್ಯಾರಿ ಲೇಖಕ ಪ್ರೊ. ಬಿ. ಎಂ. ಇಚ್ಚಂಗೋಡು ಬ್ಯಾರಿ ಭಾಷೆಯ ಬಗ್ಗೆ ಕುತೂಹಲಕಾರಿ ಚರ್ಚೆಗಳನ್ನು ಈ ಕೃತಿಯಲ್ಲಿವೆ.

Related Books