“ಅಚ್ಚ ಗನ್ನಡ ನುಡಿ ಕೋಶ” ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡ ಅವರ ಭಾಷಾ ಸಾಹಿತ್ಯದ ಕೃತಿಯಾಗಿದೆ. ಈ ಪುಸ್ತಕವು ಕನ್ನಡದ ಶಬ್ದಕೋಶಗಳಿಂದ ಕೂಡಿದ್ದು, ಇಲ್ಲಿ ಅಪೂರ್ವ ಪದ ಪ್ರಯೋಗಗಳಿವೆ, ನೂತನ ಶಬ್ದ ಸೃಷ್ಟಿಯಿದೆ. ಕನ್ನಡದ ಮೇಲಿನ ಹೆಚ್ಚಿನ ಒಲವುಳ್ಳ ಇವರ ಗದ್ಯ ಬರಹಗಳಲ್ಲಿಯೂ ಅಚ್ಚಗನ್ನಡದ ಅಚ್ಚೊತ್ತಿದೆ. ಕನ್ನಡವು ಆಳವುಳ್ಳ ಭಾಷೆ, ಸರಳವೂ ಸ್ವತಂತ್ರವೂ ಆದ ನುಡಿ, ಸಾವಿರ ವರ್ಷಗಳ ಹಿಂದಿನಿಂದ ಬಾಳಿದ ನುಡಿ, ಇಂದಿಗೂ ಬೆಳೆಯುತ್ತಿರುವ ನುಡಿಗಳನ್ನು ಇಲ್ಲಿ ಕಾಣಬಹುದು. ಕನ್ನಡದ ಹೊನ್ನಿನಂತಹ ನುಡಿಗಳನ್ನು ನಾವು ಹೆಚ್ಚಾಗಿ ಬಳಸದೆ ಅವು ಒಂದೊಂದಾಗಿ ಕಣ್ಮರೆಯಾಗುತ್ತಿವೆ. ನಮ್ಮ ನುಡಿಗಳನ್ನು ಆಯ್ದು ಬಳಸಬೇಕು. ಸಾಲದೆಡೆ ಪರರಿಂದ ಸಾಲ ತರಬೇಕು. ಈ ನಿಟ್ಟಿನಲ್ಲಿ ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡ ಅವರು ಅರ್ಥಪೂರ್ಣವಾದ “ಅಚ್ಚ ಗನ್ನಡ ನುಡಿ ಕೋಶ”ವನ್ನು ರಚಿಸಿದ್ದಾರೆ.
©2025 Book Brahma Private Limited.