ಭಾರತದ ದ್ರಾವಿಡ ಭಾಷಾ ವರ್ಗದಲ್ಲಿ ಕನ್ನಡವು ಪ್ರಮುಖ ಹಾಗೂ ಪ್ರಾಚೀನ ಭಾಷೆ. ಕನ್ನಡದಲ್ಲಿ ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಎಂಬ ನಾಲ್ಕು ಪ್ರಭೇದಗಳನ್ನು ಗುರುತಿಸಲಾಗಿದೆ. ಎಲ್ಲ ಕಾಲಕ್ಕೂ, ಗ್ರಂಥಸ್ಥ ಭಾಷೆಗೂ, ಆಡು ಭಾಷೆಗೂ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಆಡುನುಡಿಯಲ್ಲಿಯೇ ಭಾಷೆಯ ಜೀವಂತಿಕೆ ಹಾಗೂ ಬೆಳವಣಿಗೆ ಇದೆ ಎಂಬುದನ್ನು ಯಾವ ವಿದ್ವಾಂಸರೂ ಅಲ್ಲಗಳಿದಿಲ್ಲ. ಕ್ರಿಸ್ತಪೂರ್ವ ಕಾಲದಲ್ಲೂ ಕನ್ನಡ ಭಾಷೆ ಇತ್ತು ಎಂಬುದು ಸಂಶೋಧನೆಗಳು ದೃಢಪಡಿಸಿವೆ. ವಿವಿಧ ಕಾಲಘಟ್ಟದಲ್ಲಿ ಕನ್ನಡವು ಒಂದು ಪ್ರಬಲ ಭಾಷೆಯಾಗಿ ಬೆಳೆದು ಬಂದ ಬಗೆಯ ವಿಶ್ಲೇಷಣಾತ್ಮಕ ಮಾರ್ಗದಲ್ಲಿ ಮೂಡಿರುವ ಕೃತಿಯೇ ”ಕನ್ನಡ ಭಾಷಾ ಪ್ರಭೇದಗಳು’. 1998ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿತ್ತು.
©2025 Book Brahma Private Limited.