ಶ್ರಮವು ಎಲ್ಲ ಬಗೆಯ ಉತ್ಪಾದನೆಯ ಮೂಲ. ಅದು ದೈಹಿಕ ಇಲ್ಲವೇ ಮಾನಸಿಕ ಶ್ರಮವೂ ಆಗಿರಬಹುದು. ಶ್ರಮವಿಲ್ಲದೇ ಮನುಷ್ಯ ಬದುಕುವುದು ಅಸಾಧ್ಯ. ಶ್ರಮದ ವಿಕಾಸವೇ ಮಾನವ ಚರಿತ್ರೆಯ ವಿಕಾಸವೂ ಆಗಿದೆ. ಶ್ರಮಿಕ ವರ್ಗ ಹಾಗೂ ಶ್ರಮವನ್ನು ನಿರ್ದೇಶಿಸುವ ವರ್ಗದ ಮಧ್ಯೆ ಸಂಘರ್ಷಗಳು ಇತಿಹಾಸದ ತುಂಬ ಕಾಣ ಸಿಗುತ್ತವೆ. ಶ್ರಮಭಾಷೆಯ ನೆಲೆಯಿಂದ ಸಾಹಿತ್ಯ-ಸಮಾಜ ಹಾಗೂ ಸಂಸ್ಕೃತಿಯನ್ನು ಕೃತಿಯಲ್ಲಿ ವಿಶ್ಲೇಷಿಸಿದ್ದು, ನೂತನ ಚಿಂತನೆಯನ್ನು ಪ್ರೇರೇಪಿಸುತ್ತದೆ.
©2024 Book Brahma Private Limited.