ಯುಜಿಸಿ ಪ್ರಾಯೋಜಿತ ಕಾರ್ಯಾಗಾರದಲ್ಲಿ ಮಂಡಿಸಿದ ಲೇಖನಗಳ ಸಂಕಲನ- ಪದವಿ ಪಠ್ಯಗಳಲ್ಲಿ ಸಾಂಸ್ಕೃತಿಕ ಸಂಗತಿಗಳಿರಬೇಕೆ, ಪ್ರಾದೇಶಿಕ ಭಿನ್ನತೆ ಅನಿವಾರ್ಯವೇ ಇಂತಹ ಹಲವು ಬಿಕ್ಕಟ್ಟುಗಳಿವೆ. ಇವೆಲ್ಲವನ್ನೂ ಚರ್ಚಿಸಿದ ನಂತರ ಪಠ್ಯ ಸಂವಹನಗೊಳ್ಳುವ ಬಗೆ ಹೇಗೆ, ವಿದ್ಯಾರ್ಥಿ ಪಠ್ಯವನ್ನು ಯಾವ ಹಿನ್ನೆಲೆಯಲ್ಲಿ ಗ್ರಹಿಸುತ್ತಾನೆ, ಅಧ್ಯಾಪಕ ಯಾವ ನೆಲೆಯಲ್ಲಿ ಅರ್ಥೈಸುತ್ತಾನೆ, ಸಂವಹನ ಸರಳವೇ, ಕಷ್ಟವೇ ಇಂತಹ ಬಿಕ್ಕಟ್ಟುಗಳು ಮುಂದುವರೆದಿವೆ. ಆದರೆ ಭಾಷೆ ಪಠ್ಯ ಸಂವಹನಗಳು ಒಂದಕ್ಕೊಂದು ಪೂರಕ. ಭಾಷೆಯ ಮೂಲಕ ಪಠ್ಯವೋ, ಪಠ್ಯದ ಮೂಲಕ ಭಾಷೆಯೋ, ಯಾವ ಕ್ರಮದಿಂದ ಸಂವಹನ ಸುಲಭವಾಗಬಲ್ಲದು ಎಂಬ ಸಂಶೋಧನೆಗಳು ಮುಂದುವರೆದಿವೆ. ಪಠ್ಯವನ್ನು ಬೌದ್ಧಿಕವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವಾಗ ಅಧ್ಯಾಪಕನಿಗಿರುವ ಮಿತಿಗಳೇನು ಅವುಗಳನ್ನು ಮೀರುವ ಬಗೆ ಹೇಗೆ ಎಂಬ ಚರ್ಚೆಯನ್ನೊಳಗೊಂಡ ಲೇಖನಗಳು ಈ ಕೃತಿಯಲ್ಲಿವೆ.
©2024 Book Brahma Private Limited.