ಕನ್ನಡ ಭಾಷಾಶಾಸ್ತ್ರ

Author : ರಾ.ಯ. ಧಾರವಾಡಕರ

Pages 224

₹ 190.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಹಿರಿಯ ಸಾಹಿತಿ ಡಾ. ರಾ.ಯ. ಧಾರವಾಡಕರ್ ಅವರು ಕನ್ನಡ ಭಾಷೆಯ ಚರಿತ್ರೆ, ಅದರ ಶಾಸ್ತ್ರೀಯ ವಿವರಣೆ ನೀಡುವ ಮೂಲಕ ಕನ್ನಡ ಭಾಷಾ ಶಾಸ್ತ್ರದ ಘನತೆಯನ್ನು ತೋರುವ ಕೃತಿ ಇದು. ಕನ್ನಡ ಭಾಷೆಯ ಲಿಪ್ಯಂತರ, ಲಿಪಿ ಬೆಳೆದು ಬಂದ ಬಗೆ...ಹೀಗೆ ಒಂದು ಭಾಷೆಯ ಬೆಳವಣಿಗೆಯಲ್ಲಿಯ ಮಹತ್ವದ ತಿರುವುಗಳ ಪಕ್ಷಿನೋಟ ನೀಡುವ ಹಾಗೂ ಸಂಶೋಧನಾತ್ಮಕ ಹೊಳವುಗಳನ್ನು ನೀಡುವ ಕೃತಿ ಇದು.

About the Author

ರಾ.ಯ. ಧಾರವಾಡಕರ
(15 July 1919 - 12 April 1991)

ಭಾಷಾಶಾಸ್ತ್ರ, ರಾಜಕಾರಣ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಹಾಗೂ ಕನ್ನಡ ಭಾಷಾ ಸಾಹಿತ್ಯದ ಕುರಿತು ಅಧ್ಯಯನ ನಡೆಸಿದವರಲ್ಲಿ ಪ್ರಮುಖರು ರಾ, ಯ. ಧಾರವಾಡಕರ್ ಅವರು. ಇವರು ಜನಿಸಿದ್ದು 1919 ಜುಲೈ 15ರಂದು. ತಂದೆ ಯಲಗುರ್ದರಾವ್‌, ತಾಯಿ ಗಂಗಾಬಾಯಿ. ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮುಂಬೈ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಸಾಂಗ್ಲಿಯ ವಿಲ್ಲಿಂಗ್‌ಡನ್‌ನಲ್ಲಿ ಬಿ.ಎ. ಪದವಿ ಪಡೆದರು. ಕನ್ನಡ ಹಾಗೂ ಇಂಗ್ಲಿಷ್‌ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ಪತ್ರಿಕಾ ವ್ಯವಸಾಯ, ಕರ್ನಾಟಕದಲ್ಲಿ ವೃತ್ತ ಪತ್ರಿಕೆಗಳು, ಸಾಹಿತ್ ಸಮೀಕ್ಷೆ, ಕನ್ನಡ ಭಾಷಾ ಶಾಸ್ತ್ರ, ಧೂಮ್ರವಲಯಗಳು, ತೂರಿದ ಚಿಂತನೆಗಳು, ನವಿಲುಗರಿ ...

READ MORE

Related Books