‘ಪದಮಾಲೆ’ ಪ್ರಕಾಶ್ ರಾಜಗೋಳಿ ಅವರ ಕೃತಿಯಾಗಿದೆ. ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ, ಕ್ರೀಡೆ ಹೀಗೆ ಹತ್ತು ಹಲವಾರು ಕ್ಷೇತ್ರದ ವಿಷಯಗಳ ಬಗ್ಗೆ ಮತ್ತು ಈ ಕ್ಷೇತ್ರಗಳ ಸಾಧಕರ ವಿವರಗಳನ್ನು ಸುಳಿವುಗಳಲ್ಲಿ ಅಳವಡಿಸಲಾಗಿದೆ. ಈ ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು. ಸಾಮಾನ್ಯ ಬಳಕೆಯ ಪದಗಳ ಜೊತೆಗೆ ಅಷ್ಟೇನೂ ಬಳಕೆಯಲ್ಲಿಲ್ಲದ ಗ್ರಾಂಥಿಕ ಪದಗಳು ಮತ್ತು ಕೆಲ ಪ್ರಾಂತೀಯ ಪದಗಳೂ ಸೇರಿಕೊಂಡಿವೆ. ಕನ್ನಡದ ಸಾಮಾನ್ಯ ಜನರಿಗೆ, ಕನ್ನಡ ಭಾಷೆ ಕಲಿಯಲಿಚ್ಛಿಸುವವರಿಗೆ, ವಿಶೇಷವಾಗಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಪುಸ್ತಕ ರಚಿಸಲಾಗಿದೆ. ಅವರಲ್ಲಿ ಕನ್ನಡದ ಬಗ್ಗೆ ಆಸಕ್ತಿ ಹುಟ್ಟಿಸಿ, ಚಿಂತನೆಗೆ ತೊಡಗಿಸಿ ತನ್ಮೂಲಕ ಪದಗಳ ಬಳಕೆ ಹೆಚ್ಚಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಸದುದ್ದೇಶ ಈ ಪುಸ್ತಕದ್ದು.
©2025 Book Brahma Private Limited.