ಕನ್ನಡ ಭಾಷೆ ಬಳಕೆ ಸಂಬಂಧಿಸಿದಂತೆ ಮಾಹಿತಿ ನೀಡುವ ಹತ್ತು ಲೇಖನಗಳ ಸಂಗ್ರಹ ’ಪದ ಪುರಾಣ’. ರವೀಂದ್ರ ಬಟಗೇರಿ ಅವರ ಚೊಚ್ಚಲ ಕೃತಿ ಇದಾಗಿದ್ದು, ಕನ್ನಡ ವಿಶ್ವವಿದ್ಯಾಲಯದ ವಾರದ ಚರ್ಚೆಯಲ್ಲಿ ನಡೆದ ವಿಷಯ ಚರ್ಚೆಯನ್ನು ಇಲ್ಲಿನ ಲೇಖನಗಳಲ್ಲಿ ಬರೆಯಲಾಗಿದೆ. ಇಲ್ಲಿನ ಲೇಖನಗಳು, ಪದ, ವಾಕ್ಯ, ಲಿಪಿ, ಧ್ವನಿಗೆ ಸಂಬಂಧಿಸಿದ್ದಾಗಿದೆ.
ಈ ಕೃತಿಯಲ್ಲಿ ಕನ್ನಡ ಪದ ರಚನಾ ವಿಧಾನವನ್ನು ಗಮನಿಸುತ್ತಾ ಪ್ರತಿಧ್ವನಿ ಪದಗಳ ಬಗ್ಗೆಯೂ ಚರ್ಚಿಸಲಾಗಿದೆ. ಕನ್ನಡ ಆಡುನುಡಿಯ ಧ್ವನಿ ವ್ಯತ್ಯಾಸಗಳನ್ನು ಗಮನಿಸುತ್ತಾ, ಶಿಷ್ಠಕನ್ನಡದೊಂದಿಗೆ ಹೋಲಿಸಿ, ಚರ್ಚಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.
©2024 Book Brahma Private Limited.