ಜನರ ದೈನಂದಿನ ಬದುಕಿನ ಕಷ್ಟಕಾರ್ಪಣ್ಯಗಳ ನಡುವೆ ಗಾದೆಗಳು ಹುಟ್ಟುತ್ತವೆ. ಜನರು ಬದುಕಿನಲ್ಲಿ ಕಲಿತ ಪಾಠದಕ ಕೊಡುಗೆಯದು. ಗಾದೆಗಳು ಹುಟ್ಟಿರುವುದು ಮಹಾನ್ ಪಂಡಿತರಿಂದಲ್ಲ. ಜನಸಾಮಾನ್ಯರಿಂದ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಒಂದು ಗಾದೆಯೇ ಗಾದೆಗಳ ಹಿರಿಮೆಯನ್ನು ಹೇಳುತ್ತದೆ. ಹಲವು ಗಾದೆಗಳನ್ನು ಸಂಗ್ರಹಿಸಿ, ಅದರ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಆರಂಭದಲ್ಲಿ ಗಾದೆಯ ಮಹಿಮೆಯನ್ನು ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಗಾದೆಯ ಪ್ರಾಚೀನತೆಯನ್ನು ಸಂಕ್ಷಿಪ್ತವಾಗಿ ಈ ಕೃತಿಯಲ್ಲಿ ಪರಿಚಯಿಸಲಾಗಿದ್ದು, ಅದಕ್ಕಿರುವ ಬೇರೆ ಬೇರೆ ಸಾಮಾಜಿಕ ಹಿನ್ನೆಲೆಗಳನ್ನು ವಿವರಿಸಿದ್ದಾರೆ. 'ಗಾದೆ ಬರಿಯ ಉಪದೇಶವಲ್ಲ. ಪ್ರತಿಯೊಂದು ಭಾಷೆಯಲ್ಲೂ ಹೇರಳವಾಗಿರುವ ಗಾದೆಗಳು ಹೇಳದ ವಿಷಯವಿಲ್ಲ. ಗಾದೆ ಒಳಗೊಳ್ಳದ ವಸ್ತು ವಿಷಯ ಯಾವುದೂ ಇರಲಿಕ್ಕಿಲ್ಲ. ಗಾದೆಗಳ ಸಂಗ್ರಹವನ್ನು ಜನಸಾಮಾನ್ಯರ ವಿಶ್ವಕೋಶ' ಎಂದು ಕರೆಯುವುದರಲ್ಲಿ ಗಾದೆಗಳ ವ್ಯಾಪ್ತಿ, ವಸ್ತು ವೈವಿಧ್ಯ, ಸಂಖ್ಯಾಬಾಹುಳ್ಯ ಹಾಗೂ ಜೀವನ ದರ್ಶನದ ಅರಿವಾಗುತ್ತದೆ'' ಎಂಬೂದು ಲೇಖಕರ ಮಾತು.
©2025 Book Brahma Private Limited.