ಲೇಖಕ ಕೆ.ಪಿ. ಭಟ್ ಅವರ ಸಾಹಿತ್ಯ ಕೃತಿ ʻಕನ್ನಡ ಭಾಷೆ : ರಚನೆ ಮತ್ತು ಬಳಕೆʼ. ಪುಸ್ತಕವು ಭಾಷೆ ಎಂದರೇನು? ವ್ಯಾಕರಣ ಎಂದರೇನು? ಪ್ರಾಚೀನ ಕನ್ನಡ ವ್ಯಾಕರಣಗಳು ಮತ್ತು ಅವುಗಳ ವಿಧಾನಗಳು ಯಾವವು? ಕನ್ನಡದ ಧ್ವನಿ ವ್ಯವಸ್ಥೆ ಮತ್ತು ಕನ್ನಡ ಪದರಚನೆಯ ವಿಶೇಷತೆಗಳೇನು? ವಾಕ್ಯರಚನೆಯ ವಿಧಾನಗಳು ಯಾವವು? ಹೀಗೆ ಕನ್ನಡ ಭಾಷೆಯ ರಚನೆ ಮತ್ತು ಬಳಕೆಯ ಕುರಿತು ವಿವರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಇದು ಕನ್ನಡ ಭಾಷೆಯ ಕಲಿಕೆ ಮತ್ತು ಬೋಧನೆಯ ಮೇಲೆ ಬೆಳಕು ಚೆಲ್ಲುವುದರಿಂದ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಮಾರ್ಗದರ್ಶಕವಾಗುವ ಕೃತಿಯಾಗಿದೆ.
©2025 Book Brahma Private Limited.