ಶಂಬಾ ಭಾಷಿಕ ಸಂಶೋಧನೆ

Author : ಮೊಗಳ್ಳಿ ಗಣೇಶ್

Pages 160

₹ 120.00




Year of Publication: 2014
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಕನ್ನಡದ ಖ್ಯಾತ ವಿದ್ವಾಂಸ, ಭಾಷೆ ಮತ್ತು ಸಂಸ್ಕೃತಿ ತಜ್ಞ ಡಾ. ಶಂಬಾ ಜೋಶಿ ಅವರ ಭಾಷಿಕ ಚಿಂತನೆಯ ನೆಲೆಗಳು ಈ ಕೃತಿಯಲ್ಲಿವೆ. ಕನ್ನಡ ಭಾಷೆಯ ರಚನೆ, ಕನ್ನಡ ಭಾಷೆಯ ಸಾಮಾಜಿಕ ಚಹರೆ, ಕಣ್ಮರೆಯಾದ ಕರ್ನಾಟಕದ ಹುಡುಕಾಟ, ಕನ್ನಡ -ಕರ್ನಾಟಕ ಕುರಿತು ಶಂಬಾ ವಿಚಾರ ಸರಣಿ, ಭಾಷೆಯ ಅವಸ್ಥಾಂತರದ ಕುರುಹುಗಳಾಗಿ ಸ್ಥಳನಾಮಗಳು, ಶಂಬಾ ಅವರ ಗದ್ಯಶೈಲಿ ಮತ್ತು ಅಧ್ಯಯನದ ವೈಧಾನಿಕತೆ ಮುಂತಾದ ವಿಷಯಗಳನ್ನು ಕುರಿತು ಲೇಖಕ ಮೊಗಳ್ಳಿ ಗಣೇಶ್ ಅವರು ವಿಶ್ಲೇಷಿಸಿದ್ದಾರೆ.

About the Author

ಮೊಗಳ್ಳಿ ಗಣೇಶ್
(01 July 1962)

ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು.  ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು.  ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...

READ MORE

Related Books