‘ಕನ್ನಡ ಓದು ಬರಹದ ಸಾಮಾನ್ಯ ತಪ್ಪುಗಳು ಭಾಗ-2’ ಟಿ.ಎಸ್. ವೇಣುಗೋಪಾಲ್ ಅವರ ಕೃತಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಶ್ರೀ ಟಿ. ಎಸ್. ಗೋಪಾಲ್ ಕಲಿಕೆಯ ದಿನಗಳಿಂದಲೂ ಕನ್ನಡ ಭಾಷೆ –ಸಾಹಿತ್ಯಗಳ ನೈತಿಕ ವಿದ್ಯಾರ್ಥಿ. ಮೊದಲಿನಿಂದಲೂ ಸಾಹಿತ್ಯ, ಶಾಸ್ತ್ರಗಳಲ್ಲಿ ಅವರಿಗೆ ಅಪಾರವಾದ ಆಸಕ್ತಿ. ಅದರ ಫಲವೇ ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆಗಾಗಿ ಅವರು ಬರೆದಿರುವ ಹಲವಾರು ಹೊತ್ತಗೆಗಳು. ಭಾಷಾ ಕೇಂದ್ರಿತವಾದ ಈ ಕಿರುಪುಸ್ತಿಕೆಗಳು ನಾಡಿನಾದ್ಯಂತ ಜನಪ್ರಿಯವಾಗಿವೆ. ಹಳಗನ್ನಡ ಕಲಿಕೆ, ಪ್ರಬಂಧ ರಚನೆ, ಗಾದೆಗಳ ವಿಸ್ತರಣೆ, ಪದಸಂಪತ್ತು, ಕವಿಪರಿಚಯ, ಕವಿಸೂಕ್ತಿಗಳು – ಹೀಗೆ ಕನ್ನಡ ನುಡಿಯ ನಾನಾ ಪದರಗಳನ್ನು ಇವು ಬಿಚ್ಚಿಟ್ಟಿವೆ.
©2024 Book Brahma Private Limited.