‘ತುಳುನಾಡ ಸಿರಿ’ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ರಾಜ್ಯ ಸಂಪನ್ಮೂಲ ಕೇಂದ್ರದ ನವಸಾಕ್ಷರರ ಪುಸ್ತಕ ಮಾಲೆಯಲ್ಲಿ ಪ್ರಕಟವಾದ ಕೃತಿ. 1994-95ನೇ ಸಾಲಿಗೆ ಜನಶಿಕ್ಷಣ ನಿಲಯಗಳಿಗೆ ನವಸಾಕ್ಷರರ ಪುಸ್ತಕ ಮಾಲೆಯಲ್ಲಿ ವಿಜ್ಞಾನ, ಗ್ರಾಮೀಣ ಅಭಿವೃದ್ಧಿ, ಜನಪದ, ಸೃಜನಶೀಲ ಹಾಗೂ ಐತಿಹಾಸಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 120 ಪುಸ್ತಕಗಳನ್ನು ಆಯಾ ಕ್ಷೇತ್ರದ ತಜ್ಞ ಲೇಖಕರಿಂದ ಬರೆಯಿಸಿ ಪ್ರಕಟಿಸಲಾಗಿದೆ. ಮುದ್ರಣಕ್ಕೆ ಮೊದಲು ಕ್ಷೇತ್ರಮಟ್ಟದಲ್ಲಿ ನವಸಾಕ್ಷರರಿಂದ ಓದಿಸಿ ಅಗತ್ಯ ಕಂಡುಬಂದ ಕಡೆಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಈ ಪುಸ್ತಕಗಳು ನವಸಾಕ್ಷರರಿಗೆ ಹೆಚ್ಚು ಉಪಯುಕ್ತವಾಗಿದ್ದು, ಅವರ ಆಸಕ್ತಿಗೆ ಅನುಗುಣವಾಗಿ ಅವರಿಂದ ಸ್ವೀಕರಿಸಲ್ಪಟ್ಟರೆ ನಮ್ಮೆಲ್ಲರ ಶ್ರಮ ಸಾರ್ಥಕವಾಗುತ್ತದೆ ಎಂದಿದ್ದಾರೆ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕರಾಗಿದ್ದ ಪಿ. ಸುಬ್ಬರಾವ್. ತುಳುನಾಡ ಸಿರಿ ಕೃತಿಯನ್ನು ಲೇಖಕಿ ಧರಣಿದೇವಿ ಮಾಲಗತ್ತಿ ನವಸಾಕ್ಷರರು ಸುಲಭವಾಗಿ ಓದಲು ಅನುಕೂಲವಾಗುವಂತೆ ಸರಳವಾಗಿ ರಚಿಸಿದ್ದಾರೆ.
©2024 Book Brahma Private Limited.