ಲೇಖಕ ಎನ್. ಶಂಕರಪ್ಪ ತೋರಣಗಲ್ಲು ಅವರ ಕೃತಿ-ಲಿಪಿ ನಿಗೂಢ. ದಾಖಲೆಗಳ ಪೈಕಿ ಬರಹವು ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಬರಹವೆಂದರೆ ಲಿಪಿ. ಈ ಲಿಪಿಗಳು ಎಲ್ಲಿಯೋ ರೂಪು ತಳೆಯುತ್ತವೆ. ಮತ್ತೆಲ್ಲಿಯೋ ರೂಪು ಬದಲಿಸಿಕೊಂಡು ವಿಸ್ತಾರವಾಗಿ ಹರಡುತ್ತವೆ. ಮಾತ್ರವಲ್ಲ; ಕವಲೊಡೆಯುತ್ತಾ, ವೈವಿಧ್ಯಮಯಗೊಳ್ಳುತ್ತವೆ. ಈ ಲಿಪಿಗಳೇ ಭಾಷೆಯ ರೂಪ ಪಡೆಯುತ್ತವೆ. ಈ ಭಾಷೆಯು ಸಂಸ್ಕೃತಿಗೆ, ನಾಗರಿಕತೆ ರೂಪು ನೀಡುತ್ತದೆ. ಬಹುತೇಕ ಲಿಪಿಗಳು ಕಾಲಕ್ರಮೇಣ ನಶಿಸಿ ಹೋಗಿವೆ. ಕೆಲವೊಂದು ಲಿಪಿಗಳನ್ನು ಕಂಡು ಮೂಲ ಮಾನವ ಬೆರಗುಗೊಂಡಿದ್ದು, ತನಗೆ ತಿಳಿಯದೇ ಹೋದಾಗ ಅದನ್ನು ದೈವತ್ವಕ್ಕೆ ಏರಿಸಿದ್ದಾನೆ. ಇಂತಹ ಅಚ್ಚರಿಯ ಸಂಗತಿಗಳ ಕುರಿತು ನಡೆದ ಜಿಜ್ಞಾಸೆಯೇ ಈ ಕೃತಿಯ ವೈಶಿಷ್ಟ್ಯವಾಗಿದೆ.
©2024 Book Brahma Private Limited.