ಟಿ. ಎಸ್. ಗೋಪಾಲ್ ಕಲಿಕೆಯ ದಿನಗಳಿಂದಲೂ ಕನ್ನಡ ಭಾಷೆ–ಸಾಹಿತ್ಯಗಳ ನೈತಿಕ ವಿದ್ಯಾರ್ಥಿ. ಮೊದಲಿನಿಂದಲೂ ಸಾಹಿತ್ಯ, ಶಾಸ್ತ್ರಗಳಲ್ಲಿ ಅವರಿಗೆ ಅಪಾರವಾದ ಆಸಕ್ತಿ. ಅದರ ಫಲವೇ ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆಗಾಗಿ ಅವರು ಬರೆದಿರುವ ಹಲವಾರು ಹೊತ್ತಗೆಗಳು. ಭಾಷಾ ಕೇಂದ್ರಿತವಾದ ಈ ಕಿರುಪುಸ್ತಿಕೆಗಳು ನಾಡಿನಾದ್ಯಂತ ಜನಪ್ರಿಯವಾಗಿವೆ. ಹಳಗನ್ನಡ ಕಲಿಕೆ, ಪ್ರಬಂಧ ರಚನೆ, ಗಾದೆಗಳ ವಿಸ್ತರಣೆ, ಪದಸಂಪತ್ತು, ಕವಿಪರಿಚಯ, ಕವಿಸೂಕ್ತಿಗಳು – ಹೀಗೆ ಕನ್ನಡ ನುಡಿಯ ನಾನಾ ಪದರಗಳನ್ನು ಇವು ಬಿಚ್ಚಿಟ್ಟಿವೆ.
ಕನ್ನಡಭಾಷೆಯ ಚರಿತ್ರೆ, ಪರಂಪರೆ, ಸಾಹಿತ್ಯ ಸಮೃದ್ಧವಾದುದು. ಅನೇಕ ಅವಸ್ಥಾಂತರಗಳನ್ನು ಕ್ಷಮಿಸಿ ಇಪ್ಪತ್ತೊಂದನೆಯ ಶತಮಾನದ ಈಗಿನ ಸ್ಥಿತಿಗೆ ತಲುಪಿರುವಂತಹದು. ಜಗತ್ತಿನ ಎಲ್ಲ ಪ್ರಾಚೀನ ಭಾಷೆಗಳಂತೆ ಕನ್ನಡದ ಮೇಲೂ ಅನೇಕ ಭಾಷೆಗಳ ಪ್ರಭಾವವೊದಗಿದೆ. ಸೋದರ ದ್ರಾವಿಡಭಾಷೆಗಳು ಸಂಸ್ಕೃತ, ಪ್ರಾಕೃತ, ಇಂಗ್ಲಿಷ್, ಹಿಂದಿ, ಮರಾಠಿ, ಮತ್ತಿತರ ಅನೇಕ ಭಾಷೆಗಳಿಂದ ಕನ್ನಡದ ಬೆಳವಣಿಗೆಗೆ ಒದಗಿಸುವ ನೆರವು ಗಮನಾರ್ಹ.
©2025 Book Brahma Private Limited.