ಕನ್ನಡದ ಹಿರಿಯ ವಿದ್ವಾಂಸ ದೇವರ ಕೊಂಡಾರೆಡ್ಡಿ ಅವರ ಶಾಸ್ತ್ರ ಸಾಹಿತ್ಯ ಗ್ರಂಥವು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಬಗೆಗೆ ಮಾಹಿತಿ ನೀಡುವ ಮಹತ್ತರದ ಗ್ರಂಥವಾಗಿದೆ. ಕೃತಿಯ ಪರಿವಿಡಿಯಲ್ಲಿ ಕನ್ನಡ ಭಾಷಾ ವಿಜ್ಞಾನ ಕ್ಷೇತ್ರಕ್ಕೆ ಪಾಶ್ಚಾತ್ಯರ ಕೊಡುಗೆ, ವ್ಯಾಕರಣದಿಂದ ಭಾಷಾ ಶಾಸ್ತ್ರದ ಕಡೆಗೆ ಅಧ್ಯಯನಗಳು ನಡೆದುಬಂದ ದಾರಿ, ಭಾಷಾ ಶಾಸ್ತ್ರದ ವ್ಯಾಕರಣಗಳನ್ನು ಕುರಿತ ಮುಖ್ಯವಾದ ಕೃತಿಗಳು, ಕನ್ನಡದಲ್ಲಿ ಅರ್ವಾಚೀನ ನಿಘಂಟುಗಳು, ಲಕ್ಷಣಶಾಸ್ತ್ರ ನಿಘಂಟುಗಳು, ಸಾಹಿತ್ಯ ನಿಘಂಟುಗಳು, ಕನ್ನಡದ ವಿಶಿಷ್ಟ ಪದಕೋಶಗಳು, ಶಬ್ದಗಳಿಗೆ ಸಂಬಂಧಿಸಿದ ಪದಕೋಶಗಳು, ಕನ್ನಡ ಗ್ರಂಥ ಸಂಪಾದನಾ ಶಾಸ್ತ್ರದ ಇತಿಹಾಸ,ಕನ್ನಡ ಗ್ರಂಥ ಸಂಪಾದನೆ: ಒಂದು ಪರಿಶೀಲನೆ, ಹಸ್ತಪ್ರತಿಶಾಸ್ತ್ರ: ಅಧ್ಯಯನ ಚರಿತ್ರೆವಿಶ್ವಕೋಶಗಳು ಸೇರಿದಂತೆ 22 ಶೀರ್ಷಿಕೆಗಳಿವೆ.
©2024 Book Brahma Private Limited.