ಹಿಂದಿನ ತಲೆಮಾರಿನವರು ಕನ್ನಡಕ್ಕಾಗಿ ಯಾವ ರೀತಿ ದುಡಿದರು ಎಂಬುದು ಇವತ್ತಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಲೇಖಕ ಪರಮೇಶ್ವರಯ್ಯ ಸೊಪ್ಪಿಮಠ ಅವರು ಹೊರತಂದ ಕೃತಿ ಇದಾಗಿದೆ. ಈ ಕೃತಿಯಲ್ಲಿ ಕನ್ನಡಕ್ಕಾಗಿ ದುಡಿದ ಜೀವನ ಮುಡಿಪಾಗಿಟ್ಟ 16 ಜನರ ರೋಚಕ ಬದುಕನ್ನು ಸಶಕ್ತವಾಗಿ ನಿರೂಪಿಸಲಾಗಿದೆ. ಇವು ವ್ಯಕ್ತಿಗತವಾಗಿ ಬಿಡಿಬಿಡಿ ಲೇಖನಗಳಾಗಿ ಕಂಡರೂ, ಕನ್ನಡ-ಕರ್ನಾಟಕತ್ವದ ಬಗ್ಗೆ ಇಲ್ಲಿಯ ಹದಿನಾರು ಜನ ಮಹನೀಯರು ಇಟ್ಟ ದಿಟ್ಟಹೆಜ್ಜೆ, ಪಟ್ಟ ಪರಿಶ್ರಮ, ಕೊಟ್ಟ ಸಾಹಿತ್ಯ ಕೊಡುಗೆಗಳನ್ನು ಅಖಂಡ ಕರ್ನಾಟಕತ್ವದ ಏಕೀಕರಣ ಚರಿತ್ರೆಯನ್ನಾಗಿ ಪರಿಭಾವಿಸಬಹುದಾಗಿದೆ.
ಕನ್ನಡ ಋಷಿ : ಕಿಟೆಲ್, ಭುವನೇಶ್ವರಿಯ ಜೀವಕಳೆ : ಡೆಪ್ಯೂಟಿ ಚೆನ್ನಬಸಪ್ಪ, ಕನ್ನಡ ಶಾಸನ ಬ್ರಹ್ಮ : ರೈಸ್, ಸಿರಿಗನ್ನಡದ ತೇರು : ರಾ.ಹ.ದೇಶಪಾಂಡೆ, ಕನ್ನಡದ ಪುಣ್ಯ ಪುರುಷ : ಗಳಗನಾಥ, ವಚನ ಪ್ರಕಾಶ: ಹಳಕಟ್ಟಿ, ಕನ್ನಡ ಪುರೋಹಿತ : ಆಲೂರು ವೆಂಕಟರಾಯ, ಸರ್ವಜ್ಞ ಸಮರ್ಪಿತ ಜೀವ: ಉತ್ತಂಗಿ ಚನ್ನಪ್ಪ, ಗಡಿನಾಡ ಭುವನೇಶ್ವರಿ : ಜಯದೇವಿತಾಯಿ, ಕನ್ನಡದ ಸ್ವಾಮೀಜಿ : ತೋಂಟದ ಸಿದ್ಧಲಿಂಗ ಮಹಾಸ್ವಾಮಿ ಮುಂತಾದ ಲೇಖನಗಳನ್ನು ಇಲ್ಲಿ ಕಾಣಬಹುದಾಗಿದೆ.
©2024 Book Brahma Private Limited.